ರಾಜಕೀಯ

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಕೋಡಂಗಿಯಾಗಿದೆ: ಬಿಜೆಪಿ ವ್ಯಂಗ್ಯ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಕೋಡಂಗಿಯಾಗಿದೆ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಗಿ ಟ್ವೀಟ್‌ ಮಾಡಿದೆ. ಜೆಡಿಎಸ್‌ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್‌.ಡಿ.ರೇವಣ್ಣ ಅವರು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿ ಫೋಟೋ ಸಮೇತ ಬಿಜೆಪಿ ಕಾಂಗ್ರೆಸನ್ನು ಲೇವಡಿ ಮಾಡಿದೆ.

ಈಗ ಗೊತ್ತಾಯಿತಲ್ಲ ಸರ್ಕಾರವನ್ನು ನಡೆಸುತ್ತಿರುವುದು ಯಾರು ಎಂದು ಬಿಜೆಪಿ ಬರೆದು ಕೊಂಡಿದೆ. ಸರ್ಕಾರದ ಪರವಾಗಿ ಕೇಂದ್ರ ಸಚಿವರ ಭೇಟಿಗೆ ತೆರಳಿದ್ದ ವೇಳೆ ಕಾಂಗ್ರೆಸ್‌ ಪಕ್ಷದ ಯಾವೋಬ್ಬ ಪ್ರತಿನಿಧಿಯೂ
ಇರಲಿಲ್ಲ. ಹೀಗಾಗಿ ಬಿಜೆಪಿ ಲೇವಡಿ ಮಾಡಿದೆ.

 

About the author

ಕನ್ನಡ ಟುಡೆ

Leave a Comment