ಸುದ್ದಿ

ಮೈಸೂರಿನ ಅದ್ವಯ ಶಿಕ್ಷಣ ಟ್ರಸ್ಟ್ ಗೆ ಬೆಂಕಿ; ಪೊಲೀಸರ ನಿರ್ಲಕ್ಷ್ಯ

ಮೈಸೂರಿನ ಅದ್ವಯ ಶಿಕ್ಷಣ ಸಂಸ್ಥೆಗೆ ರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಇಲ್ಲಿವರೆಗೂ ಪೊಲೀಸ್ ಇಲಾಖೆ ಬಂಧಿಸದಿರುವುದು ಸಂಶಯಾಸ್ಪದಕ್ಕೆ ಎಡೆಮಾಡಿದೆ. ಕಾರಣ ಕಳೆದ ತಿಂಗಳವಷ್ಟೇ ಸಂಸ್ಥೆಯ ಸೆಂದಿಲ್ ಅವರು ಸ್ನೇಹಿತರೊಂದಿಗೆ ಅರ್ಪಣಾ ಹೋಟೆಲ್ ಎಂಬ ಕೇವಲ ಹತ್ತು ರೂಪಾಯಿಯಲ್ಲಿ ಟಿಫಿನ್, ಊಟ ನೀಡಿ ಪ್ರಚಾರ ಗಿಟ್ಟಿಸಿದಾಗ ಸಹಿಸಲಾಗದ ಕೆಲ ಹೊಟೆಲ್ ಮಾಲೀಕರು ಮತ್ತು ರಾಜಕೀಯ ನಾಯಕರ ಕೈವಾಡದಿಂದ ಈ ಕುಕೃತ್ಯ ನಡೆದಿರಬಹುದು ಎಂದು ಅನುಮಾನಿಸಲಾಗಿದೆ.
ಬೆಂಕಿ ಹತ್ತಿ ಎರಡು ದಿನಗಳಾದರೂ ಈವರೆಗೂ ಸ್ಪಂದಿಸದ ಸ್ಥಳಿಯ ಪೊಲೀಸ್ ಅಧಿಕಾರಿಗಳ ನಡೆ ತೀವ್ರ ಪ್ರಶ್ನಾತೀತವಾಗಿದೆ.

ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಜರುಗಿಸಿ ಅಪರಾಧಿಗಳನ್ನು ಬಂಧಿಸುವರೋ ಕಾದು ನೋಡಬೇಕಿದೆ.

About the author

ಕನ್ನಡ ಟುಡೆ

Leave a Comment