ದೇಶ ವಿದೇಶ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದೇಶಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ

ಮೈಸೂರು: ದುಷ್ಕರ್ಮಿಯೊಬ್ಬ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ಜರ್ಮನಿಯ ಮಹಿಳೆಯ ಮೊಬೈಲ್‌ ಕಿತ್ತುಕೊಂಡು, ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಬಳಿ ನಡೆದಿದೆ.

ಜರ್ಮನಿಯ 23 ವರ್ಷದ ಜೆನಿಫರ್ ಬಾಲ್ಕೆ ಎಂಬ ಯುವತಿ ಪ್ರವಾಸಕ್ಕಾಗಿ ಫೆಬ್ರವರಿ 13 ರಂದು ಮೈಸೂರಿಗೆ ಬಂದಿದ್ದು, ನಿನ್ನೆ ಸಂಜೆ ಚಾಮುಂಡಿ ಬೆಟ್ಟದ ಸೂರ್ಯಸ್ತಮಾನವನ್ನು ವೀಕ್ಷಣೆ ಮಾಡಿಕೊಂಡು ಮೆಟ್ಟಿಲಿನ ಮೂಲಕ ನಡೆದುಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಯುವಕನೊಬ್ಬ ಮೊಬೈಲ್ ಕಿತ್ತುಕೊಂಡು ಮುತ್ತು ಕೊಡಲು ಯತ್ನಿಸಿದ್ದಾನೆ. ಪ್ರತಿರೋಧವೊಡ್ಡಿದ ಯುವತಿಯ ಮೇಲೆ ಹಲ್ಲೆ ಮಾಡಿ ಬ್ಯಾಗಿನಲ್ಲಿದ್ದ 2500 ರೂಪಾಯಿ ಹಣವನ್ನು ಕಿತ್ತು ಪರಾರಿಯಾಗಿದ್ದಾನೆ
  1. ಬಳಿಕ ಬೆಟ್ಟಕ್ಕೆ ತೆರಳಿದ ಗರುಡ ವಾಹನ ಆಕೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಆಕೆ ತಂಗಿದ್ದ ಹೋಟೆಲ್‌ಗೆ ಬಿಟ್ಟಿದ್ದಾರೆ.

    ಆಕೆ ನೀಡಿದ ದೂರಿನ ಅನ್ವಯ ಐಪಿಸಿ 394, 354, 326 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕೆ.ಆರ್ ಠಾಣಾ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಇದಕ್ಕಾಗಿ ಸಿಸಿಬಿಯ ವಿಶೇಷ ತಂಡವನ್ನು ಸಹ ರಚಿಸಿದ್ದು ಶೀಘ್ರವೇ ಯುವಕನನ್ನು ಬಂಧಿಸಲಾಗುವುದೆಂದು ಕಾನೂನು ಸುವ್ಯವಸ್ಥೆ ಡಿಸಿಪಿ ಡಾ.ಹೆಚ್.ಟಿ ಶೇಖರ್ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment