ಸುದ್ದಿ

ಮೈಸೂರು ಅಭಿವೃದ್ಧಿಗೆ ನೀಲ ನಕ್ಷೆ ಸಿದ್ಧಪಡಿಸುವಲ್ಲಿ ಡಿಸಿ ಮುನ್ನಡೆ.

ಮೈಸೂರು: ನಿನ್ನೆಯಷ್ಟೇ ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಐಎಎಸ್‌ ಅಧಿಕಾರಿ ಡಿ.ರಂದೀಪ್‌ ಬಿಡುಗಡೆ ಹೊಂದಿದ್ದರೂ ಸಾಂಸ್ಕೃತಿಕ ಮೈಸೂರು ಜಿಲ್ಲೆಯು ಅಭಿವೃದ್ಧಿಯ ಕನಸಿನಿಂದ ಹೊರ ಬಂದಿಲ್ಲ.
ಕಳೆದ ಒಂದೂವರೆ ವರ್ಷಗಳಿಂದ ಮೈಸೂರು ಜಿಲ್ಲಾಧಿಕಾರಿಯಾಗಿ ಹಲವು ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಗೆ ಶ್ರಮಿಸಿದ್ದ ಡಿ.ರಂದೀಪ್‌ ಭವಿಷ್ಯದಲ್ಲಿ ಮೈಸೂರಿನ ಅಭಿವೃದ್ಧಿ ಹೇಗಿರಬೇಕು ಎಂಬುದರ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

ಸೋಮವಾರವಷ್ಟೇ ಮೈಸೂರಿಗೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ಬಂದ ಶಿವಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದ ರಂದೀಪ್‌ ಜಲದರ್ಶಿನಿಯಲ್ಲಿರುವ ತಮ್ಮ ವಸತಿ ಗೃಹದಲ್ಲಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ನಡೆಸಿದ ಸಭೆ ಕೈಗೊಂಡ ಅಭಿವೃದ್ಧಿ ಕಾರ್ಯ ಸರಕಾರದಿಂದ ಬಿಡುಗಡೆಯಾದ ಅನುದಾನ ಸಿಎಸ್‌ಆರ್‌ನಿಂದ ಪಡೆದ ಅನುದಾನ ಹೀಗೆ ಸಮಗ್ರ ಮಾಹಿತಿಯನ್ನು ದಾಖಲೆ ಮಾಡುತ್ತಿರುವ ರಂದೀಪ್‌ ಭವಿಷ್ಯದಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಮೈಸೂರಿನ ಅಭಿವೃದ್ಧಿಗೆ ಯಾವ ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸ ಬಹುದು ಎಂಬ ಪಟ್ಟಿಯನ್ನೇ ಸಿದ್ಧಪಡಿಸುತ್ತಿದ್ದಾರೆ. ಮೈಸೂರು ಜಿಲ್ಲೆಯ ಸಮಗ್ರ ಈಗಿರುವ ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಹೇಳುತ್ತಾರೆ ಡಿ.ರಂದೀಪ್‌

ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಲು ಇರುವ ಕಾನೂನು ತೊಡಕು ನಿವಾರಣೆಯಾಗಲು ಇನ್ನೂ ವಾರಗಳ ಕಾಲ ಸಮಯ ಬೇಕಾಗಿರುವುದರಿಂದ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಾದ ಮೇಲುಕೋಟೆ ಕಬಿನಿ ಹಿನ್ನೀರು ಕೆಆರ್‌ಎಸ್‌ ಮೊದಲಾದ ಸ್ಥಳಗಳಿಗೆ ಕುಟುಂಬದವರೊಂದಿಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದರು.

ಕಳೆದ ಒಂದೂವರೆ ವರ್ಷಗಳ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಸಾಕಷ್ಟು ತೃಪ್ತಿ ತಂದಿದೆ. ಮೈಸೂರಿನ ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳು ನನ್ನ ಮನಸ್ಸಿನಲ್ಲಿದ್ದು ಅದನ್ನು ದಾಖಲೆ ಮಾಡಿ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ಅವರಿಗೆ ನೀಡಲಾಗುವುದು ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment