ಸುದ್ದಿ

ಮೈಸೂರು ಅರಮನೆಯಲ್ಲಿ ಅಮಿತ್ ಶಾ, ರಾಜವಂಶಸ್ಥರ ಭೇಟಿ

ಮೈಸೂರು: ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಶುಕ್ರವಾರ ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮೈಸೂರು ಅರಮನೆಗೆ ಆಗಮಸಿದ ಅಮಿತ್ ಶಾ ಮೈಸೂರು ರಾಜವಂಶಸ್ಥರನ್ನು ಭೇಟಿ ಮಾಡಿದರು, ರಾಜಮಾತೆ ಪ್ರಮೋದಾದೇವಿ ಒಡೆಯರ್​, ಮಹಾರಾಜ ಯದುವೀರ್​ ಒಡೆಯರ್​ ಜತೆ ಅಮಿತ್ ಶಾ ಮಾತುಕತೆ ನಡೆಸಿದರು. ಬಳಿಕ ಯದುವೀರ್​ ಒಡೆಯರ್​ ಮಗುವನ್ನು ಎತ್ತಿಕೊಂಡ ಅಮಿತ್ ಶಾ ಕೆಲಹೊತ್ತು ಆಟವಾಡಿಸಿದರು.
 ಇದೇ ಮೊದಲ ಬಾರಿಗೆ ಮೈಸೂರು ಅರಮನೆಗೆ ಅಮಿತ್​ ಷಾ ಭೇಟಿ ನೀಡಿದ್ದು, ಅಲ್ಲಿನ ಸಿಬ್ಬಂದಿ ಷಾ ಅವರಿಗೆ ಕಮಲದ ಹೂವು ಕೊಟ್ಟು ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಅನಂತ್​ಕುಮಾರ್​, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಪ್ರತಾಪ್​ ಸಿಂಹ, ಶಾಸಕ ಸಿ.ಟಿ.ರವಿ ಮತ್ತಿತರ ನಾಯಕರು ಸಾಥ್ ನೀಡಿದ್ದರು.

About the author

ಕನ್ನಡ ಟುಡೆ

Leave a Comment