ರಾಜ್ಯ ಸುದ್ದಿ

ಮೈಸೂರು: ಕಾರು ಕೆರೆಗೆ ಉರುಳಿ ಇಬ್ಬರ ಸಾವು

ಮೈಸೂರು: ಭೇರ್ಯ ಗ್ರಾಮದಲ್ಲಿ ಕಾರು ಕೆರೆಗೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಹಬ್ಬವನ್ನು ಮುಗಿಸಿಕೊಂಡು ಮರಳುವಾಗ ಘಟನೆ ನಡೆದಿದೆ. ಬೆಳಗ್ಗೆ ಕೆರೆಯಲ್ಲಿ ಕಾರನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತರು ಪಿರಿಯಾಪಟ್ಟಣದ ದೇವೇಗೌಡನಕೊಪ್ಪಲು ಗ್ರಾಮದವರು ಎನ್ನಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment