ರಾಜ್ಯ ಸುದ್ದಿ

ಮೈಸೂರು: ಕುಂಭ ಮೇಳಕ್ಕೆ ಸಜ್ಜಾಗುತ್ತಿದೆ ಟಿ. ನರಸೀಪುರ

ಮೈಸೂರು: ಫೆಬ್ರವರಿ 17 ರಿಂದ 19ರ ವರೆಗೆ ನಡೆಯುವ ಟಿ ನರಸೀಪುರದಲ್ಲಿ ನಡೆಯುವ ಕುಂಭ ಮೇಳಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಯಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತ ಸಮೂಹ ಸೇರುತ್ತದೆ.
ಸುಮರು 50 ಲಕ್ಷ ಮಂದಿ ಭಕ್ತರು ತ್ರಿವೇಣಿ ಸಂಗಮದ ಕುಂಭಮೇಳದಲ್ಲಿ ಸೇರಲಿದ್ದಾರೆ. ಈ ತ್ರಿವೇಣಿ ಸಂಗಮ ಟಿ.ನರಸೀಪುರ ತಾಲೂಕಿನ ತಿರುಮಕೂಡಲುನಲ್ಲಿ ಸೇರಲಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ  ನಡೆದ ಪ್ರಾಥಮಿಕ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ  ಭಾಗವಹಿಸಿದ್ದರು,  ಕುಂಭ ಮೇಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಕಾರ್ಯಕ್ರಮಗಳನ್ನು, ಹಣದ ಕೊರತೆಯ ನಡುವೆಯೂ ಯಾವುದೇ ದೂರು ಬಾರದಂತೆ ಆಯೋಜಿಸಲಾಗುವುದು ಎಂದು ಜಿ.ಟಿ ದೇವೇಗೌಡ ತಿಳಿಸಿದ್ದಾರೆ. ಈ ಮೆಗಾ ಕಾರ್ಯಕ್ರಮವನ್ನು ಸರ್ಕಾರವೇ ಆಯೋಜಿಸುತ್ತಿದ್ದು, ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಲಾಗುತ್ತಿದೆ, ಕಾರ್ಯಕ್ರಮದಲ್ಲಿ ಅತಿ ಗಣ್ಯರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಾರೆ, ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿಗಳು ಭಾಗವಹಿಸಿದ್ದರು.

About the author

ಕನ್ನಡ ಟುಡೆ

Leave a Comment