ರಾಜಕೀಯ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರ: ದೇವೇಗೌಡ, ಸಿದ್ದರಾಮಯ್ಯಗೆ ಪ್ರತಿಷ್ಠೆಯ ವಿಷಯ

ಮೈಸೂರು: ಮಾಜಿ ಸಿಎಂ ಕಾಂಗ್ರೆಸ್ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಕ್ಷೇತ್ರದ ಗೆಲುವು ಪ್ರತಿಷ್ಠೆಯ ವಿಷಯವಾಗಿದೆ, ಈ ಭಾಗದಲ್ಲಿ ಕೇಸರಿ ಪಕ್ಷ ನಿಧಾನವಾಗಿ ತನ್ನ ಬೇರೂರುತ್ತಿದೆ,. ಜೆಡಿಎಸ್ ಜೊತೆಗಿನ ನಿರಂತರ ಚೌಕಾಶಿ ನಂತರ ಸಿದ್ದರಾಮಯ್ಯ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಗೆ ಪಡೆದುಕೊಂಡಿದ್ದಾರೇ, ಮಾಜಿ ಸಂಸದ ಹಾಗೂ ಕುರುಬ ನಾಯಕ ಸಿ,ಎಚ್ ವಿಜಯ್ ಶಂಕರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ, ಹಾಲಿ ಸಂಸದ ಪ್ರತಾಪ್ ಸಿಂಹ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೇ ಅದರ ನಿಜವಾದ ಗೆಲುವು ಸಿದ್ದರಾಮಯ್ಯ ಅವರದ್ದು, ಮೈಸೂರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿರುವುದರಿಂದ ಇದು ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಜೊತೆಗಿನ ಕಾಂಗ್ರೆಸ್ ಹೋರಾಟ ಮುಂದುವರಿದಿದೆ. ಬಿಜೆಪಿ ಮೋದಿ ಕಾರ್ಡ್ ಜೊತೆಗೆ ಪ್ರತಾಪ್ ಸಿಂಹ ಅಭಿವೃದ್ಧಿ ಕೆಲಸಗಳು ಬಿಜೆಪಿಗೆ ವರದಾನವಾಗಲಿದೆ,

ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟ ಮೇಲೆ ಮೈತ್ರಿ ಪಕ್ಷಗಳು ಒಮ್ಮೆಯೂ ಒಟ್ಟಿಗೆ ಬಂದು ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಆದರೆ ಈಗ ಸಮಯ ಬಹಳ ಕಡಿಮೆಯಿದೆ,  ಇನ್ನೂ ಜೆಡಿಎಸ್ ಸಚಿವ ಜಿ,ಟಿ ದೇವೇಗೌಡ ಮತ್ತು ಸಿದ್ದರಾಮಯ್ಯ ತಮ್ಮ ವೈರತ್ವವನ್ನು ಪಕ್ಕಕ್ಕಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಒಪ್ಪಂದ ಮಾಡಿಕೊಂಡಿದ್ದಾರೆ,  ಈ ಮೂಲಕ ಮತದಾರರಿಗೆ ಧನಾತ್ಮಕ ಸಂದೇಶ ರವಾನಿಸಿದ್ದಾರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತ ಸಿದ್ದರಾಮಯ್ಯ ಒಳಗೊಳಗೆ ಜ,ಟಿ ದೇವೇಗೌಡ ವಿರುದ್ಧ ಗುಟುರು ಹಾಕುತ್ತಿದ್ದಾರೆ, ಆದರೆ ಈ ಚುನಾವಣೆಗಾಗಿ ಇಬ್ಬರು ತಮ್ಮ ಹಳೇ ಧ್ವೇಷ ಮರೆತು  ತಮ್ಮ ಅಹಂ  ಹಾಗೂ ಗೌರವ ಬದಿಗಿಟ್ಟು ಒಟ್ಟಿಗೆ ಪ್ರಚಾರದಲ್ಲಿ ಭಾಗಿಯಾಗವುದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋತರೇ ಹಳೇ ಮೈಸೂರು ಭಾಗದಲ್ಲಿ ಪಕ್ಷ ತನ್ನ ಹಿಡಿತ ಕಳೆದುಕೊಳ್ಳುತ್ತದೆ, ಸಿದ್ದರಾಮಯ್ಯ ನಾಯಕತ್ವ ಪ್ರಶ್ನಿಸುವಂತಾಗುತ್ತದೆ, ಸಿದ್ದರಾಮಯ್ಯ ಅವರಿಗೆ ಸಂಪುಟ ವಿಸ್ತರಣೆ ಅಧಿಕಾರವನ್ನು ಕೊಟ್ಟಿರುವ ಹೈಕಮಾಂಡ್, ಮೈಸೂರು-ಕೊಡಗು ಕ್ಷೇತ್ರ ಸೋತರೆ ಸಿದ್ದರಾಮಯ್ಯ ಅವರ ಮೇಲಿರುವ ನಂಬಿಕೆ ಹಾಗೂ ವಿಶ್ವಾಸ ಕಳೆದುಕೊಳ್ಳುತ್ತದೆ. ತಮ್ಮ ಎಲ್ಲಾ ವೈರತ್ವ, ದ್ವೇಷ ಪಕ್ಕಕ್ಕಿಟ್ಟು ಗುರು-ಶಿಷ್ಯ ಒಂದಾಗಿದ್ದು ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.

ಕೊಡಗು ಸಾಂಪ್ರಾದಾಯಿಕ ಬಿಜೆಪಿ ಬೆಂಬಲಿತ ಭದ್ರಕೋಟೆ, ಕಾಂಗ್ರೆಸ್ ಇಲ್ಲಿ ಏಕತೆಯ ಮಂತ್ರ ಪಠಿಸುತ್ತಿದೆ, ವಿಜಯ್ ಶಂಕರ್ ಸಂಸದ, ಶಾಸಕ ಹಾಗೂ ಸಚಿವರಾಗಿದ್ದವರು, ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನಗೊಂಡಿರುವ ಬಿಜೆಪಿ ನಾಯಕರನ್ನು ವಿಜಯ್ ಶಂಕರ್ ತಮ್ಮ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ,  ಆದರೆ ಬಿಎಸ್ ಪಿ ಯಿಂದ ಸ್ಪರ್ಧಿಸಿರುವ ಬಿ .ಚಂದ್ರ ಅವರು ಅಹಿಂದ ಮತಗಳನ್ನು ಪಡೆಯುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ಗೆ ಹೊಡೆತ ಬೀಳುವ ಸಂಭವವಿದೆ, ಬಿಜೆಪಿ  ಅಭ್ಯರ್ಥಿ ಪ್ರತಾಪ್ ಸಿಂಹ ಕಳೆದ ಮೂರು ತಿಂಗಳ ಹಿಂದಿನಿಂದಲೇ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ,. ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಗೊಂದಲವನ್ನು ಅವರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ಈ ಭಾಗದಲ್ಲಿ ಬಿಜೆಪಿಯ ನಾಲ್ಕು ಹಾಗೂ ಜೆಡಿಎಸ್ ನ ಮೂರು ಮತ್ತು ಕಾಂಗ್ರೆಸ್ ನ ಓರ್ವ ಶಾಸಕ ಇದ್ದಾರೆ, ಮೈತ್ರಿ ಪಕ್ಷದ ಕಾರ್ಯಕರ್ಟರು ತಳ ಮಟ್ಟದ ಜನರನ್ನು ತಲುಪಲು ಸಾಧ್ಯವಿಲ್ಲ, ಹೀಗಾಗಿ ಒಕ್ಕಲಿಗ ಮತಗಳು ತಮ್ಮ ಕಡೆಗೆ ವಾಲುವ ಸಾಧ್ಯತೆಯಿದೆ.

About the author

ಕನ್ನಡ ಟುಡೆ

Leave a Comment