ರಾಜಕೀಯ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಸೇಬಿನ ಹಾರ ಹಾಕಿ ಸ್ವಾಗತ

ಮೈಸೂರು:  ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಲ್ಲಿ ಠಿಕಾಣಿ ಹೂಡಿದ್ದಾರೆ. ಕಳೆದ ಎರಡು ದಿನಗಳಿಂದ ಚುನಾವಣಾ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ, ಭಾನುವಾರ ಮೈಸೂರು ಸಮೀಪದ ಹೂಟಗಳ್ಳಿ ಪ್ರದೇಶದಲ್ಲಿ ರೋಡ್ ಶೋ ನಡೆಸಿದರು.

ಸಿದ್ದರಾಮಯ್ಯ ಅವರ ಜೊತೆ ಪುತ್ರ ಯತೀಂದ್ರ  ಹಾಗೂ ಅವರ ಆಪ್ತರ ಜೊತೆ ಸೇರಿ ಮನೆ ಮನೆ ಪ್ರಚಾರ ನಡೆಸಿದರು, 18 ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ಅವರಿಗೆ 750 ಕೆಜಿ ತೂಕದ ಸೇಬಿನ ಹಾರ ಹಾಕಿ  ಹೂವಿನ ಮಳೆ ಸುರಿಸಲಾಯಿತು.
 ಬಿಜೆಪಿ,ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ. ನನಗೆ ಕರ್ನಾಟಕ ಜನರ ನಾಡಿ ಮಿಡಿತ ಗೊತ್ತಿದೆ. ನಮ್ಮ ಕಾರ್ಯಕ್ರಮಗಳನ್ನು ಜನ ಒಪ್ಪಿದ್ದಾರೆ, ಆಡಳಿತ ವಿರೋಧಿ ಅಲೆ ನಮ್ಮ ಸರ್ಕಾರಕ್ಕೆ ಇಲ್ಲ. ಉಪ ಚುನಾವಣೆಯಲ್ಲಿ ನೀವು ನನ್ನ ಕೈ ಹಿಡಿದಿದ್ದಿರಿ.. ಇದು ನನ್ನ ಕಡೆ ಚುನಾವಣೆ,ಈ ಚುನಾವಣೆಯಲ್ಲಿ ಗೆದ್ದು ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು.

ಇನ್ನೂ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು. ನಾಗವಾಲ, ಟಿ ಕಟೂರ್, ಹೊಸು ಹುಂಡಿ, ಬಂಡಿಪಾಳ್ಯ ಮತ್ತಿತರ ಗ್ರಾಮಗಳಲ್ಲಿ ಯುವಕರ ಜೊತೆ ಪಾದಯಾತ್ರೆ ನಡೆಸಿದರು, ಹಿನಕಲ್ ಗ್ರಾಮ ಪಂಚಾಯಿತಿ ಉಪಧ್ಯಾಕ್ಷ ಸಿ,ಸ್ವಾಮಿ ಮತ್ತು  ಅಣ್ಣಯ್ಯ ನಾಯಕ ಇದೇ ವೇಳೆ ಜೆಡಿಎಸ್ ಸೇರ್ಪಡೆಗೊಂಡರು.

About the author

ಕನ್ನಡ ಟುಡೆ

Leave a Comment