ರಾಜ್ಯ ಸುದ್ದಿ

ಮೈಸೂರು ದಸರಾಗೂ ತಟ್ಟಿದೆ ಜೆಡಿಎಸ್-ಕಾಂಗ್ರೆಸ್ ಭಿನ್ನಮತದ ಬಿಸಿ

ಮೈಸೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಯ ಹೋರಾಟ ಮೈಸೂರು ದಸರಾ ಉತ್ಸವಕ್ಕೂ ತಟ್ಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಸಿದ್ಧತೆಯನ್ನು ಕೇವಲ ಜೆಡಿಎಸ್ ಪಕ್ಷದ ಮುಖಂಡರು ಮಾತ್ರ ಮಾಡುತ್ತಿರುವುದು ಕಂಡುಬಂತು. ಕಾಂಗ್ರೆಸ್ ನ ಯಾವೊಬ್ಬ ಮುಖಂಡರು ದಸರಾ ಹಬ್ಬದ ತಯಾರಿ ಬಗ್ಗೆ ಇನ್ನು ಕೂಡ ಇತ್ತ ತಲೆಹಾಕಿಲ್ಲ. ಮೈಸೂರು ದಸರಾ ಉತ್ಸವ ಆರಂಭಕ್ಕೆ ಇನ್ನೊಂದು ವಾರ ಬಾಕಿಯಿದೆ. ಆದರೆ ಇನ್ನು ಕೂಡ ದಸರಾ ಉತ್ಸವ ಉಪ ಸಮಿತಿಯನ್ನು ರಚಿಸಿಲ್ಲ.

ಉಪ ಸಮಿತಿಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಇದ್ದಾರೆ. ಆದರೆ ಕಾಂಗ್ರೆಸ್ ಕಾಂಗ್ರೆಸ್ ನಿಂದ ಸದಸ್ಯರ ತಂಡಕ್ಕೆ ಇನ್ನು ಕೂಡ ಹೆಸರು ಸೂಚಿಸಿಲ್ಲ. ಇದಕ್ಕೆಲ್ಲಾ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕಾರಣ ಎಂದು ಆರೋಪಿಸಲಾಗುತ್ತಿದೆ. ಅವರು ಮೈಸೂರಿನಲ್ಲಿ ನಡೆದ ದಸರಾ ಉತ್ಸವ ಸಮಿತಿ ಸಭೆಯಲ್ಲಿ ಭಾಗವಹಿಸಲಿಲ್ಲ. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ಭಿನ್ನಮತ ಕಾರಣ ಎನ್ನಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ನಮ್ಮ ಪಕ್ಷದಿಂದ ಸದಸ್ಯರ ಪಟ್ಟಿಯನ್ನು ಕೇಳಿಲ್ಲ ಮತ್ತು ದಸರಾ ಸಮಿತಿ ಸಭೆಗೆ ನಮ್ಮನ್ನು ಕರೆಯಲೂ ಇಲ್ಲ ಎನ್ನುತ್ತಾರೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್ ಮೂರ್ತಿ.

ಜಿಲ್ಲೆಗೆ ಕಾಂಗ್ರೆಸ್ ನಿಂದನ ಯಾವೊಬ್ಬ ಸಚಿವರು ಇಲ್ಲದಿರುವುದರಿಂದ ದಸರಾ ಉತ್ಸವ ತಯಾರಿಯಲ್ಲಿ ಜೆಡಿಎಸ್ ನಾಯಕರೇ ಮುಂದೆ ಬರುತ್ತಿದ್ದಾರೆ. ಅಧಿಕೃತ ಆಹ್ವಾನ ಮತ್ತು ಉತ್ತಮ ಬಾಂಧವ್ಯದಿಂದ ಕರೆಯದಿದ್ದರೆ ನಾವು ಹೇಗೆ ಹೋಗಲು ಸಾಧ್ಯ ಎಂದು ಅವರು ಕೇಳುತ್ತಾರೆ. ಅಕ್ಟೋಬರ್ 10ರಂದು ಉದ್ಘಾಟನೆಗೊಳ್ಳಲಿರುವ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿರುವುದರಿಂದ ಉಪ ಸಮಿತಿಯ ಸಭೆಗೆ ಇನ್ನು ಮಹತ್ವವಿಲ್ಲ ಎಂಬುದು ಅವರ ಅಭಿಪ್ರಾಯ. ದಸರಾ ಉತ್ಸವ ತಯಾರಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನದಿಂದ ಕೆಲ ಕಾಂಗ್ರೆಸ್ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ. ಅವರು ಇಂದಿನಿಂದ ಮೈಸೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರ ನಡುವಿನ ಭಿನ್ನಮತ. ದಸರಾ ಪೋಸ್ಟರ್ ನಲ್ಲಿ ತಮ್ಮ ಭಾವಚಿತ್ರ ಹಾಕಲಿಲ್ಲ ಎಂಬ ಸಿಟ್ಟಿನಿಂದ ಜೆಡಿಎಸ್ ಸಚಿವ ಸಿ ಎಸ್ ಪುಟ್ಟರಾಜು ಇತ್ತೀಚೆಗೆ ನಡೆದ ಸಭೆಯಿಂದ ಹೊರನಡೆದಾಗಲೇ ಬೆಳಕಿಗೆ ಬಂದಿತ್ತು.

About the author

ಕನ್ನಡ ಟುಡೆ

Leave a Comment