ರಾಜಕೀಯ

ಮೈಸೂರು ಪಾಲಿಕೆ ನಿರೀಕ್ಷೆಯಂತೇ ದೋಸ್ತಿ ಮಡಿಲಿಗೆ: ಪುಷ್ಪಲತಾ ಮೇಯರ್​, ಶಫಿ ಅಹ್ಮದ್​ ಉಪ ಮೇಯರ್

ಮೈಸೂರು: ನಿರೀಕ್ಷೆಯಂತೆಯೇ ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಕೂಟಕ್ಕೆ ಒಲಿದಿದೆ. ಕಾಂಗ್ರೆಸ್​ನ ಪುಷ್ಪಲತಾ ಜಗನ್ನಾಥ್​ ಮೇಯರ್​ ಆಗಿ ಆಯ್ಕೆಯಾದರೆ, ಜೆಡಿಎಸ್​ನ ಶಫಿ ಅಹ್ಮದ್​ ಉಪ ಮೇಯರ್​ ಆಗಿ ಆಯ್ಕೆಯಾದರು.

ಅತಂತ್ರ ಮೈಸೂರು ಪಾಲಿಕೆಯಲ್ಲಿ ಅಧಿಕಾರ ರಚಿಸಲು ಮೈತ್ರಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್​- ಜೆಡಿಎಸ್​ ಘೋಷಿಸಿದ್ದವು. ಆದರೆ, ಮೇಯರ್​ ಸ್ಥಾನಕ್ಕಾಗಿ ಎರಡೂ ಪಕ್ಷಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿತ್ತು. ದೇವೇಗೌಡ -ಸಿದ್ದರಾಮಯ್ಯ ಚರ್ಚೆ ನಂತರ ಮೇಯರ್​ ಹುದ್ದೆ ಕಾಂಗ್ರೆಸ್​ಗೆ ಸಿಕ್ಕಿತ್ತು. ಅದರಂತೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಪುಷ್ಪಲತಾ ಜಗನ್ನಾಥ್​ ಅವರು ಮೇಯರ್​ ಆಗಿ ಆಯ್ಕೆಯಾದರು.

​ಪುಷ್ಪಲತಾ ಜಗನ್ನಾಥ್ ಅವರಿಗೆ 48 ಮತಗಳು ಸಿಕ್ಕರೆ, ಬಿಜೆಪಿಯ ಸುನಂದಾ ಫಾಲನೇತ್ರ ಪರವಾಗಿ 24 ಮತಗಳು ಬಿದ್ದವು. ಈ ಮೂಲಕ ಅವರು 24 ಮತಗಳ ಜಯ ಸಾಧಿಸಿದರು. ಇನ್ನು ಜೆಡಿಎಸ್​ನ ಶಫಿ ಅಹ್ಮದ್​ ಅವರಿಗೂ 48 ಮತಗಳು ಬಂದವು. ಬಿಜೆಪಿಯ ಸತೀಶ್​ ಅವರಿಗೆ 24 ಮತ ಪಡೆದ ಪರಾಭವಗೊಂಡರು. ಮೊದಲ ಎರಡು ವರ್ಷ ಕಾಂಗ್ರೆಸ್​ಗೆ ಮೇಯರ್​ ಹುದ್ದೆ, ನಂತರದ ಮೂರು ವರ್ಷ ಜೆಡಿಎಸ್​ಗೆ ಮೇಯರ್​ ಹುದ್ದೆ ನೀಡಲು ಎರಡೂ ಪಕ್ಷಗಳ ನಾಯಕರು ಒಪ್ಪಿದ್ದಾರೆ.

About the author

ಕನ್ನಡ ಟುಡೆ

Leave a Comment