ರಾಜಕೀಯ

ಮೈಸೂರು ಮೇಯರ್ ಗದ್ದುಗೆ ಗುದ್ದಾಟ: ತವರಿನಲ್ಲಿ ಅಧಿಕಾರಕ್ಕಾಗಿ ಅಖಾಡಕ್ಕಿಳಿದ ಸಿದ್ದರಾಮಯ್ಯ

ಮೈಸೂರು: ಮೈಸೂರು ನಗರ ಪಾಲಿಕೆಯ ಮೇಯರ್- ಉಪ ಮೇಯರ್ ಚುನಾವಣೆ ಇಂದು 11 ಘಂಟೆಗೆ ನಡೆಯಲಿದ್ದು, ಯಾರು ಮೇಯರ್ ಆಗಬೇಕೆಂಬ ವಿಷಯದಲ್ಲಿ ಜೆಡಿಎಸ್-ಕಾಂಗ್ರೆಸ್‌ನ ಮುಖಂಡರು ಶುಕ್ರವಾರವಿಡಿ ಭಾರೀ ಚಟುವಟಿಕೆ ನಡೆಸಿದರು.
ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಕೂಡ ನಡೆಯಲಿದೆ. ಸಾಮಾನ್ಯ ವರ್ಗಕ್ಕೆ ಮೇಯರ್ ಪಟ್ಟ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿ ಮೇಯರ್ ಆಗಲಿದ್ದಾರೆ. ತವರು ಜಿಲ್ಲೆ ಮೈಸೂರಿನಲ್ಲಿ ಪಾಲಿಗೆ ಅಧಿಕಾರ ತಮಗೆ ಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರದ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಭೈರೇಗೌಡರ ಮೂಲಕ.  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನವೊಲಿಸಲು ಕಾರ್ಯತಂತ್ರ ರೂಪಿಸಿದ್ದಾರೆ.
ಮೇಯರ್ ಆಯ್ಕೆ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ಆದರೆ ತವರಿನಲ್ಲಿ ಕಾಂಗ್ರೆಸ್ ಗೆ ಅದಿಕಾರ ತಂದುಕೊಡಲು ತೆರೆಮರೆಯ ಕಸರತ್ತು ಮಾಡುತ್ತಿದ್ದಾರೆ, ಹೀಗಾಗಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಬಂಡಾಯ ಕಾರ್ಪೋರೇಟರ್ ಗಳ ಜೊತೆ ಚರ್ಚಿಸಿ ಬೆಂಬಲ ಪಡೆಯುವಲ್ಲಿ ಸಿದ್ದು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜೆಡಿಎಸ್‍ನ ಜಿ.ಟಿ.ದೇವೇಗೌಡ ಹಾಗೂ ಸಂಪುಟದ ಸಚಿವರಾಗಿ ಸಾ.ರಾ.ಮಹೇಶ್ ಅವರಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಧ್ವನಿಯ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಬೇಕೆಂಬುದು ಸಿದ್ದರಾಮಯ್ಯ ವಾದ.
ಬೆಂಗಳೂರು ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಮೈಸೂರು ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಕೊಡಿ’ ಎಂದು ಸಚಿವ ಸಾ.ರಾ ಮಹೇಶ್ ಪಟ್ಟು ಹಿಡಿದಿದ್ದಾರೆ, ಹೀಗಾಗಿ ಅವರು ಬಿಜೆಪಿ ಕಾರ್ಪೋರೇಟರ್ ಗಳ ಮನವೊಲಿಸಲು ಮುಂದಾಗಿದ್ದರು. ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ, ಹೀಗಾಗಿ ಮೈಸೂರು ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಬೇಕೆಂಬ ವಾದಕ್ಕೆ ಜೆಡಿಎಸ್  ಮಣಿದಿದ್ದು ಕಾಂಗ್ರೆಸ್ ಮಹಿಳಾ ಕಾರ್ಪೋರೇಟರ್ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ.

About the author

ಕನ್ನಡ ಟುಡೆ

Leave a Comment