ರಾಜ್ಯ ಸುದ್ದಿ

ಮೈಸೂರು: ಮೊಬೈಲ್ ಫೋನ್ ಕಳೆದ ಕಾರಣ ಬೇಸರಗೊಂಡು ವಿದ್ಯಾರ್ಥಿನಿ ನೇಣುಗೆ ಶರಣು

ಮೈಸೂರು: ಮೊಬೈಲ್ ಕಳೆದು ಹೋದ ಕಾರಣ ಬೇಸರಗೊಂಡು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಗಾಂಧಿನಗರ ನಿವಾಸಿ ನಿಖಿತಾ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರು ಗಾಯತ್ರಿಪುರಂ ನಲ್ಲಿರುವ ಗಣಪತಿ ಸಚ್ಚಿದಾನಂದ ಶಾಲೆಯಲ್ಲಿ  10ನೇ ತರಗತಿ ವ್ಯಾಸಂಗ ಮಡುತ್ತಿದ್ದ ನಿಖಿತಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವಿಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಆತ್ಮಹತ್ಯೆ ಕುರಿತು ಎನ್​.ಆರ್​.ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಮೊಬೈಲ್ ನಾಪತ್ತೆಯಾದದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೆ  ಅಥವಾ ಈ ಸಾವಿನ ಹಿಂದೆ ಇನ್ನೇನಾದರೂ ಕಾರಣಗಳಿದೆ ಎನ್ನುವುದನ್ನು ತನಿಖೆ ನಡೆಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment