ರಾಜಕೀಯ

ಮೊದಲ ಬಾರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಎಸ್.ಎಂ.ಕೃಷ್ಣ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್. ಎಂ ಕೃಷ್ಣ ಮುಂಬರುವ ಲೋಕಸಭೆ ಚುನಾವಣ ಪ್ರಚಾರದಲ್ಲಿ ಪಾಲ್ಗೊಳ್ಳುವ ಸುಳಿವು ನೀಡಿದ್ದಾರೆ. 2017ರಲ್ಲಿ ಬಿಜೆಪಿ ಸೇರ್ಪಡೆ ನಂತರ ಕೃಷ್ಣ 2018 ರ ವಿಧಾನಸಭೆ ಚುನಾವಣಾ ಪ್ರಚಾರದಲ್ಲೂ ಸಕ್ರಿಯವಾಗಿ ಪಾಲ್ಗೋಂಡಿರಲಿಲ್ಲ, ಮೋದಿಯ ವರ್ಚಸ್ಸು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಗೇಮ್ ಚೇಂಜರ್ ಆಗಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ನಿಮಗೆ ಅನ್ನಿಸುತ್ತೆದೆಯೇ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವ ಸಾಧ್ಯತೆ ಶೇ.50ಕ್ಕಿಂತಲೂ ಹೆಚ್ಚಿದೆ. ದೇಶವೂ ಒಬ್ಬ ನಿರ್ಣಾಯಕ ನಾಯಕತ್ವ ಗುಣ ಹೊಂದಿರುವ ಮುಖಂಡನನ್ನು ಎದುರು ನೋಡುತ್ತಿದೆ, ಈ ಹಿಂದೆ ಭಾರತ, ಅಂಜುಬುರುಕ,ದುರ್ಬಲ ಹಾಗೂ ಕೈಗೊಂಬೆ ನಾಯಕರನ್ನು ನೋಡಿದೆ, ಇದೇ ಮೊದಲ ಬಾರಿಗೆ ದೃಢ ನಿರ್ಧಾರ ತೆಗೆದುಕೊಳ್ಳುವ ನಾಯಕನನ್ನು ನೋಡುತ್ತಿದ್ದೇವೆ, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ದೇಶದ ಜನತೆ ಬಯಸುತ್ತಿದ್ದಾರೆ.

ಬಿಜೆಪಿ ಸೋಲಿಸಲು ಹಲವು ಪ್ರಾದೇಶಿಕ ಪಕ್ಷಗಳು ಸೇರಿ ಮಹಾಘಟ್ ಬಂಧನ ನಿರ್ಮಿಸಿವೆಯಲ್ಲ: ನರೇಂದ್ರ ಮೋದಿ ಮತ್ತೆ ಪಿಎಂ ಆಗುವುದನ್ನು ತಪ್ಪಿಸಲು ಹಿಡಿದಿರುವ ನೆಗೆಟಿವ್ ಹಾದಿ ಇದಾಗಿದೆ. ಮಹಾ ಘಟ್ ಬಂಧನ್ ಪ್ರಧಾನಿ ಹುದ್ದೆಯ ಪರ್ಯಾಯ ಹೆಸರಾಗಿದೆ,ತ ಪ್ರಾದೇಶಿಕ ಪಕ್ಷಗಳಿಗೆ ಇದರಿಂದ ಹಿನ್ನಡೆಯಾಗಲಿದೆ. ಮೋದಿ ವಿರೋಧಿಸುವವರು ಪರ್ಯಾಯ ನಾಯಕನ ಜೊತೆ ಬರಬೇಕು, ಇದು ಮೋದಿ V/S ಇತರ 20 ಮಂದಿಯಾಗಿದೆ, ಮುಖಂಡನಿಲ್ಲದ ಪಕ್ಷಗಳು ಬೇಕೇ ಅಥವಾ ಸಮರ್ಥ ನಾಯಕನಿರುವ ಬಿಜೆಪಿ ಬೇಕೆ ಎಂಬುದನ್ನು ಜನರು ನಿರ್ಧರಿಸಲಿದ್ದಾರೆ. ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಮಹಾಘಟಬಂಧನದ ನಾಯಕರು ಹೇಳುತ್ತಿದ್ದಾರೆ, ವಿಪಿ ಸಿಂಗ್, ಚರಣ್ ಸಿಂಗ್, ದೇವೇಗೌಡ ಹಾಗೂ ಗುಜ್ರಾಲ್ ಅವಧಿಯಲ್ಲಿ ಏನೇನು ನಡೆಯಿತು ಎಂಬುದನ್ನು ನಾವು ನೋಡಿದ್ದೇವೆ. ದೇಶಕ್ಕೆ ಸ್ಥಿರ ಸರ್ಕಾರ ಬೇಕು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ನಿಮ್ಮ ಪಾತ್ರವೇನು? ಬಿಜೆಪಿ ಪರ ಪ್ರಚಾರದಲ್ಲಿ ಪಾಲ್ಗೋಳ್ಳುವಿರಾ: ಮೋದಿ ಮತ್ತೊಮ್ಮೆ  ಪ್ರಧಾನ ಮಂತ್ರಿಯಾಗಬೇಕೇಂಬುದು ನನ್ನ ಬಯಕೆ, ಹೀಗಾಗಿ ನಾನು ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳುತ್ತೇನೆ,

ಬೆಂಗಳೂರು ಮತ್ತು ಬೇರೆ ಸ್ಥಳಗಳ ಪ್ರಚಾರದಲ್ಲಿ ಭಾಗವಹಿಸುವಿರಾ: ಎಲ್ಲಿ ಪಕ್ಷಕ್ಕೆ ಮೂರರಿಂದ ನಾಲ್ಕು ಮತಗಳು ಬರುತ್ತವೆಯೋ ಅಲ್ಲಿಗೆಲ್ಲಾ ಹೋಗಿ ನಾನು ಪ್ರಚಾರ ಮಾಡುತ್ತೇನೆ, ನನ್ನ ಪಕ್ಷಕ್ಕೆ ನಾನು ವಿದೇಯವಾದ ಕೊಡುಗೆ ನೀಡುತ್ತೇನೆ.

ರಾಜ್ಯ ಬಿಜೆಪಿ ನಾಯಕರು ನಿಮ್ಮ ಸಂಪರ್ಕದಲ್ಲಿದ್ದಾರೆಯೇ: ಹೌದು ರಾಜ್ಯ ಬಿಜೆಪಿ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ, ನಾನು ದೈನಂದಿನ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ,

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆಗೆ ಬರುತ್ತಿದ್ದಾರೆ. ಇದು ಬಿಜೆಪಿಗೆ ಎಷ್ಟರ ಮಟ್ಟಿನ ಸವಾಲು? ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಪ್ರಯತ್ನ ಮಾಡಿದೆ, ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ, ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಆರಿಸಿದೆ, ಯಡಿಯೂರಪ್ಪ ಮತ್ತವರ ಸ್ನೇಹಿತರು ಪಕ್ಷವನ್ನು ಬೇರೆಡೆ ವಿಸ್ತರಿಸಲು ಪ್ರಯತ್ನಿಸಿದ್ದಾರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪರಸ್ಪರ ತಮ್ಮ ಮತಗಳನ್ನು ವರ್ಗಾಯಿಸಲು ಸಾಧ್ಯವೇ ಎಂಬುದರ ಬಗ್ಗೆ ನನಗೆ ಅನುಮಾನವಿದೆ.

ರಾಫೇಲ್ ಡೀಲ್ ಮತ್ತು ನಿರುದ್ಯೋಗದ ಬಗ್ಗೆ ನಿಮ್ಮ ಅಭಿಪ್ರಾಯವೇನು: ಅಂತಹ ಸಮಸ್ಯೆಗಳ ಬಗ್ಗೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ, ಎರಡು ಸರ್ಕಾರಗಳ ನಡುವೆ ಹೊಂದಾಣಿಕೆ ಇರುವಾಗ, ಭಾರತದ ಪ್ರಧಾನಿ ಮತ್ತು ಪ್ರೆಂಚ್ ಅಧ್ಯಕ್ಷರ ವಿರುದ್ಧ ಉದ್ದೇಶಪೂರ್ವಕವಾಗಿ ಆರೋಪಿಸಬಾರದು, ತಂತ್ರಜ್ಞಾನ ಮುಂದುವರಿದ ಪರಿಣಾಮ ಕೆಲವೊಂದು ಅಸಮತೋಲನ ಉಂಟಾಗಿದೆ, ಇದೇ ಮೊದಲ ಬಾರಿಗೆ ಮೋದಿ 5 ವರ್ಷಗಳ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅಂಬರೀಷ್ ಅವರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಬಯಸುತ್ತಿದೆ,. ಬಿಜೆಪಿ ಕೂಡ ಅವರನ್ನು ಓಲೈಸುತ್ತಿದೆಯಲ್ಲಾ? ಈ ಬೆಳವಣಿಗೆ ಬಗ್ಗೆ ನನಗೆ ಅರಿವಿಲ್ಲ,ಶನಿವಾರ ನಾನು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ಮಂಡ್ಯಗೆ ಹೋಗುತ್ತಿದ್ದೇನೆ,. ಮಂಡ್ಯದಲ್ಲಿ ಬಿಜೆಪಿಗೆ ಉತ್ತಮ ಅಡಿಪಾಯ ಹಾಕಲು ನಾವು ಪ್ರಯತ್ನಿಸುತ್ತಿದ್ದೇವೆ, ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಜನ ಏನು ಬಯಸಿದ್ದರೋ, ಅವರಿ ನಿರೀಕ್ಷೆ ಏನು ಇತ್ತೋ ಅದ್ಯಾವುದನ್ನು ಸಮ್ಮಿಶ್ರ ಸರ್ಕಾರ ನೀಡಲು ವಿಫಲವಾಗಿದೆ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ, ಅಂತಹ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಬಜೆಟ್ ನಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ?

ತಮಿಗಿರುವ ಸೀಮಿತ ಅಧಿಕಾರದಲ್ಲಿ ತುಂಬಾ ಜನಪ್ರಿಯ ಹಾಗೂ ಮಹತ್ವಾಕಾಂಕ್ಷೆಯ ಯೋಜನೆ ಘೋಷಿಸುತ್ತಾರೆ ಎಂಬ ನಂಬಿಕೆಯಿಲ್ಲ, ಈಗಾಗಲೇ ಸಾಲಮನ್ನಾ ಘೋಷಿಸಲಾಗಿದೆ, ಅದನ್ನೂ ಈಡೇರಿಸಬೇಕು, ಆದರೆ ಇದಿ ತೀರಾ ಕಷ್ಟ ಎಂದು ನನಗೆ ಗೊತ್ತು. ಬೆಂಗಳೂರು ಅಭಿವೃದ್ಧಿ ಗೊಳಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆಯೆ?
ಇಡೀ ಭಾರತವೇ ಬೆಂಗಳೂರಿನ ಕಡೆ ತಿರುಗಿ ನೋಡುತ್ತಿದೆ, ಆದರೆ ಯಶಸ್ವಿ ಸರ್ಕಾರಗಳು ನಗರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸದಿರುವುದು ದುರಾದೃಷ್ಟ, ಬಆದರೆ ಅದರ ಅಭಿವೃದ್ಧಿಗಾಗಿ ಶ್ರಮಿಸುವುದು ಅಗತ್ಯ, ಅದಕ್ಕೆ ಇನ್ನೂ ಕಾಲ ಮಿಂಚಿಲ್ಲ.

About the author

ಕನ್ನಡ ಟುಡೆ

Leave a Comment