ರಾಷ್ಟ್ರ ಸುದ್ದಿ

ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ದೇಶದ ಸಾಲದ ಮೊತ್ತ ಶೇ. 50ರಷ್ಟು ಹೆಚ್ಚಳ, ಸಾಲ ಎಷ್ಟು ಕೋಟಿ ಗೊತ್ತಾ

ನವದೆಹಲಿ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದಲ್ಲಿ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಸಾಲದ ಮೊತ್ತದಲ್ಲಿ ಶೇ.51ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿಯ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ಸರ್ಕಾರದ ಸಾಲ ಶೇಕಡಾ 50ರಷ್ಟು ಏರಿಕೆಯಾಗಿದ್ದು, ಸರಕಾರಿ ಸಾಲದ ಬಗೆಗಿನ ಸ್ಥಿತಿಗತಿ ವರದಿಯಲ್ಲಿ ಈ ದತ್ತಾಂಶ ಪತ್ತೆಯಾಗಿದೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.
ಜೂನ್​ 2014ರವರೆಗೆ ಕೇಂದ್ರ ಸರ್ಕಾರದ ಸಾಲದ ಹೊರೆ 54 ಲಕ್ಷದ 90 ಸಾವಿರದ 763 ಕೋಟಿ ಇತ್ತು. ಆದರೆ ಬಿಜೆಪಿ ಅಧಿಕಾರಾವಧಿಯಲ್ಲಿ ಒಟ್ಟು ಸಾಲ 82 ಲಕ್ಷದ 03 ಸಾವಿರದ 253 ಕೋಟಿ ಆಗಿದೆಯೆಂದು ವಿತ್ತ ಸಚಿವಾಲಯ ವರದಿ​ ನೀಡಿದೆ. ಸಾರ್ವಜನಿಕ ಸಾಲ ರೂ.48 ಲಕ್ಷ ಕೋಟಿ ಇತ್ತು. ಇದು ಈಗ 73 ಲಕ್ಷ ಕೋಟಿ ರೂ ಆಗಿದೆ. ಅಂದರೆ ಸಾಲದ ಪ್ರಮಾಣ ಶೇ. 51.7ರಷ್ಟು ಹೆಚ್ಚಾಗಿದೆ. ಆಂತರಿಕ ಸಾಲ ಪ್ರಮಾಣದಲ್ಲೂ ಶೇ. 54ರಷ್ಟು ಏರಿಕೆಯಾಗಿದ್ದು 68 ಲಕ್ಷ ಕೋಟಿ ರೂಗೆ ಮುಟ್ಟಿದೆ ಎನ್ನಲಾಗಿದೆ.
ಇದೇ ಅವಧಿಯಲ್ಲಿ ಮಾರುಕಟ್ಟೆ ಸಾಲದಲ್ಲಿ ಶೇಕಡಾ 47.5ರಷ್ಟು ಏರಿಕೆಯಾಗಿದ್ದು ಮೋದಿ ಅಧಿಕಾರವಧಿಯಲ್ಲಿ ಸಾಲದ ಮೊತ್ತ 52 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ಚಿನ್ನದ ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಸಾಲದ ಪ್ರಮಾಣವು 2014ರ ಜೂನ್‌ ವೇಳೆಗೆ ಶೂನ್ಯವಾಗಿದ್ದು, ಈಗ ಇದು 9,089 ಕೋಟಿ ರೂ. ಆಗಿದೆ. 2010-11ರಿಂದಲೂ ಕೇಂದ್ರ ವಿತ್ತ ಸಚಿವಾಲಯವು ಸರಕಾರದ ಸಾಲದ ಪ್ರಮಾಣದ ಕುರಿತು ಸ್ಥಿತಿಗತಿ ವರದಿಯ

About the author

ಕನ್ನಡ ಟುಡೆ

Leave a Comment