ರಾಷ್ಟ್ರ ಸುದ್ದಿ

ಮೋದಿ ಪ್ರಧಾನಿಯಾಗಬೇಕೆಂದು ಹೇಳಿದ್ದವರಲ್ಲಿ ನಾನೇ ಮೊದಲಿಗನಾಗಿದ್ದೆ: ಯಶ್ವಂತ್ ಸಿನ್ಹಾ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ತೀವ್ರವಾಗಿ ಟೀಕೆ ಮಾಡುತ್ತಿರುವ ಯಶ್ವಂತ್ ಸಿನ್ಹಾ, 2014 ರಲ್ಲಿ ಮೋದಿ ಪ್ರಧಾನಿಯಾಗಬೇಕೆಂದು ಹೇಳಿದ್ದವರ ಪೈಕಿ ನಾನೇ ಮೊದಲಿಗನಾಗಿದ್ದೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಈಗಾಗಲೇ ಅರ್ಧ ದಶಕದಷ್ಟು ಸಮಯ ವ್ಯರ್ಥ ಮಾಡಿದೆ, ಮತ್ತೊಮ್ಮೆ ಮೋದಿ ಅವರನ್ನು ಆಯ್ಕೆ ಮಾಡಿದರೆ 2024 ವೇಳೆಗೆ ಭಾರತದ ಕೈಗೆ ಸಂಪೂರ್ಣವಾಗಿ ಹಾಳಾಗಿರುವ ಒಂದು ದಶಕ ಸಿಗುತ್ತದೆ ಎಂದು ಯಶ್ವಂತ್ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2014 ರ ಚುನಾವಣೆ ಸಂದರ್ಭದಲ್ಲಿ ಮೋದಿ ಪ್ರಧಾನಿಯಾಗಬೇಕೆಂದು ಹೇಳಿದ್ದವರ ಪೈಕಿ ನಾನು ಮೊದಲಿಗನಾಗಿದ್ದೆ. ಆದರೆ ಯುಪಿಎ ಸರ್ಕಾರ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಿತ್ತು ಆದರೆ ಮೋದಿ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದು ಸಿನ್ಹಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment