ರಾಜಕೀಯ

ಮೋದಿ ಮತ್ತು ಬಿಜೆಪಿಯಿಂದ ಸಂವಿಧಾನ ಹಾಗೂ ದೇಶವನ್ನು ರಕ್ಷಿಸಬೇಕು: ಸಿ.ಎಂ ಇಬ್ರಾಹಿಂ

ಹುಬ್ಬಳ್ಳಿ: ದೇಶ ಮತ್ತು ದೇಶದ ಸಂವಿಧಾನವನ್ನು ಬಿಜೆಪಿಯಿಂದ ರಕ್ಷಿಸಬೇಕಾಗಿದೆ, ಕಾಂಗ್ರೆಸ್ ನ ಹಿರಿಯ ನಾಯಕರು ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ಹೇಳಿದ್ದಾರೆ. ನಾಮಪತ್ರ ಸಲ್ಲಿಸುವ ಹಿಂದಿನ ದಿನವೇ ಧಾರವಾಡ ಅಭ್ಯರ್ಥಿ ಹೆಸರು ಅಂತಿಮವಾಗುತ್ತದೆ ಎಂದು ಹೇಳಿರುವ ಸಿಎಂ ಇಬ್ರಾಹಿಂ, ಈ ಬಾರಿಯ ಚುನಾವಣೆ ನಡೆಯುತ್ತಿರುವುದು ಅಧಿಕಾರಕ್ಕಲ್ಲ, ದೇಶವನ್ನು ರಕ್ಷಿಸುವುದಕ್ಕಾಗಿ ಎಂದು ತಿಳಿಸಿದ್ದಾರೆ. ಸಿಎಂ ಇಬ್ರಾಹಿಂ ಜೊತೆಗೆ ಧಾರವಾಡ ಟಿಕೆಟ್ ಆಕಾಂಕ್ಷಿ ವಿನಯ್ ಕುಲಕರ್ಣಿ,ಮತ್ತು ಶಕೀರ್ ಸನದಿ  ಸೇರಿದಂತೆ ಹಲವರು ಹಾಜರಿದ್ದರು.

About the author

ಕನ್ನಡ ಟುಡೆ

Leave a Comment