ರಾಜ್ಯ

ಮೋದಿ ಮಾಡುವ ಭಾಷಣದಿಂದ ಜನಸಾಮಾನ್ಯರ ಹೊಟ್ಟೆ ತುಂಬಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೆ ನೀಡಿದ ಭರವಸೆಗಳಲ್ಲಿ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಅವರು ಮಾಡುವ ಅದ್ಭುತ ಭಾಷಣದಿಂದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ಕಪ್ಪು ಹಣವನ್ನು ತಂದು ಜನರ ಅಕೌಂಟ್​ಗೆ ಹಾಕುವುದಾಗಿ ಹೇಳಿದ್ದರು. ಹಾಗಿದ್ದರೆ ಈ ಚುನಾವಣೆ ವೇಳೆ ಮೊದಲ ಇನ್​ಸ್ಟಾಲ್​ಮೆಂಟ್​ ಅನ್ನು ಜನರಿಗೆ ನೀಡಲಿ. ಲೋಕಸಭೆ ಚುನಾವಣೆ ವೇಳೆಗೆ ಎರಡನೇ ಇನ್​ಸ್ಟಾಲ್​ಮೆಂಟ್​ ಅನ್ನು ನೀಡಲಿ ಎಂದು ಮೋದಿಗೆ ಖರ್ಗೆ ಸವಾಲೆಸೆದರು.

 

About the author

ಕನ್ನಡ ಟುಡೆ

Leave a Comment