ರಾಷ್ಟ್ರ ಸುದ್ದಿ

ಮೋದಿ ವರ್ಸಸ್ ದೀದಿ: ಸುಪ್ರೀಂ ತೀರ್ಪಿನ ಬಳಿಕ ಧರಣಿ ಕೈಬಿಟ್ಟ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಸಿಬಿಐ ಅಧಿಕಾರಿಗಳು ಕೋಲ್ಕತ್ತಾ ನಗರ ಪೋಲೀಸ್ ಆಯುಕ್ತರನ್ನು ತನಿಖೆ ನಡೆಸುವುದರ ವಿರುದ್ಧ ಧರಣಿ ಪ್ರಾರಂಭಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಧರಣಿ ಯನ್ನು ಕೈಬಿಟ್ಟಿದ್ದಾರೆ.
“ಸುಪ್ರೀಂ ಕೋರ್ಟ್ ನ ಆದೇಶದ ಬಳಿಕ ವಿರೋಧ ಪಕ್ಷಗಳ ನಾಯಕರನ್ನು ಸಂಪರ್ಕಿಸಿ ಮಾತನಾಡಿದ್ದು ಇದೀಗ ನಾನು ಧರಣಿ ನಿಲ್ಲಿಸಿದ್ದೇನೆ” ಮಮತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಭಾನುವಾರ ರಾತ್ರಿಯಿಂದ ಎಸ್ಪ್ಲಾನೇಡ್ ಪ್ರದೇಶದ ಮೆಟ್ರೋ ಚಾನಲ್ ನಲ್ಲಿ ಕೇಂದ್ರ ಸರ್ಕಾರ ಃಆಗೂ ಸಿಬಿಐ ವಿರುದ್ಧ ಧರಣಿ ಕುಳಿತಿದ್ದರು. ಈ ವೇಳೆ ಆಂಧ್ರದ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಆರ್ ಜೆಡಿಯ ತೇಜಸ್ವಿ ಯಾದವ್ ಹಾಗೂ ಡಿಎಂಕೆ ನಾಯಕಿ ಕನಿಮೋಳಿ ಮಮತಾ ಅವರನ್ನು ಭೇಟಿಯಾಗಿದ್ದರು.
ಇಂದು ಬೆಳಿಗ್ಗೆ ಸಿಬಿಐ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೋಲ್ಕತ್ತಾ ನಗರ ಪೋಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು. ಶಾರದಾ ಹಗರಣ ಸಂಬಂಧದ ವಿಚಾರಣೆಗೆ ಸಹಕರಿಸಬೇಕು ಎಂದು ಆದೇಶಿಸಿದೆ.ಇದೇ ವೇಳೆ ಸಿಬಿಐ ಎಂದೂ ಅವರನ್ನು ಬಂಧಿಸುವಂತೊಇಲ್ಲ ಎಂದು ಸಹ ಕೋರ್ಟ್ ನಿರ್ದೇಶಿಸಿದೆ.

About the author

ಕನ್ನಡ ಟುಡೆ

Leave a Comment