ರಾಷ್ಟ್ರ ಸುದ್ದಿ

ಪ್ರಧಾನಿ ಮೋದಿ ವಿದೇಶ ಪ್ರಯಾಣಕ್ಕೆ 443 ಕೋಟಿ ವೆಚ್ಚ

ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಅಧಿಕೃತ ವಿದೇಶ ಪ್ರವಾಸದ ವೇಳೆ ಆಗಿರುವ ವಿಮಾನ ಪ್ರಯಾಣದ ವೆಚ್ಚ 443.4 ಕೋಟಿ ರೂ. ಎಂದು ಏರ್‌ ಇಂಡಿಯಾ ಮಾಹಿತಿ ನೀಡಿದೆ. ಆದರೆ, ಇದರಲ್ಲಿ 5 ದೇಶಗಳಿಗೆ ತೆರಳಲು ಆಗಿರುವ ವೆಚ್ಚವನ್ನು ಇನ್ನಷ್ಟೇ ಸೇರಿಸಬೇಕಿದೆ. 2014ರ ಮೇನಿಂದ ಈವರೆಗೆ ಮೋದಿ 44 ಅಂತಾರಾಷ್ಟ್ರೀಯ ಪ್ರಯಾಣ ಕೈಗೊಂಡಿದ್ದು, ಈ ವಿಚಾರದಲ್ಲಿ ಹಿಂದಿನ ಎಲ್ಲ ಪ್ರಧಾನಿಗಳನ್ನೂ ಮೀರಿಸಿದ್ದಾರೆ. ಈ ತಿಂಗಳಲ್ಲಿ ಅವರು ಯುಎಇ ಪ್ರವಾಸ ಕೈಗೊಳ್ಳಲಿದ್ದು, ಇದು ಅವರ ಹಾಲಿ ಅಧಿಕಾರಾವಧಿಯ ಕೊನೆಯ ವಿದೇಶ ಪ್ರವಾಸ ಆಗಿರಲಿದೆ. ಇದು ಕೇವಲ ಪ್ರಯಾಣದ ವೆಚ್ಚವಾಗಿದ್ದು, ವಿದೇಶ ಪ್ರವಾಸದ ವೇಳೆ ಆಗಿರುವ ಇತರೆ ವೆಚ್ಚಗಳ ಲೆಕ್ಕವಲ್ಲ ಎಂದು ಏರಿಂಡಿಯಾ ತಿಳಿಸಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 38 ಅಂತಾರಾಷ್ಟ್ರೀಯ ಪ್ರಯಾಣ ಕೈಗೊಂಡಿದ್ದು, ಪ್ರಯಾಣಕ್ಕೆ 493.22 ಕೋಟಿ ರೂ. ವೆಚ್ಚ ಮಾಡಿದ್ದರು ಎಂದು ಹೇಳಲಾಗಿದೆ.

About the author

ಕನ್ನಡ ಟುಡೆ

Leave a Comment