ರಾಜ್ಯ ಸುದ್ದಿ

ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ಮಂಡ್ಯಗೆ ಬಂದು ಮತ ಹಾಕಿ- ರಮ್ಯಾಗೆ ಬಿಜೆಪಿ ಆಹ್ವಾನ

ಬೆಂಗಳೂರು: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಏಕತಾ ಮೂರ್ತಿ ಕೆಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಿಂತಿರುವ ಚಿತ್ರದ ಕುರಿತು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಕಾಂಗ್ರೆಸ್’ನ ಸಾಮಾಜಿಕ ಮಾಧ್ಯಮ ವಿಭಾಗದ ಮೇಲ್ವಿಚಾರಣೆ ನಡೆಸುತ್ತಿರುವ ನಟಿ ರಮ್ಯಾ ಅವರು ಶನಿವಾರ ನಡೆಯಲಿರುವ ಲೋಕಸಭಾ ಉಪ ಚುನಾವಣೆಯಲ್ಲಿ ಮತ ಚಲಾಯಿಸಲು ಮಂಡ್ಯ ಜಿಲ್ಲೆಗೆ ಬರಬೇಕೆಂದು ಬಿಜೆಪಿ ಆಹ್ವಾನ ನೀಡಿದೆ.
ರಮ್ಯಾ ಅವರು ಮಂಡ್ಯ ಜಿಲ್ಲೆಗೆ ಬಂದು ಮತಹಾಕಬೇಕೆಂದು ಬಿಜೆಪಿ ಮುಖಂಡರಾದ ಶಿವಕುಮಾರ್ ಆರಾಧ್ಯ, ಸಿ.ಟಿ.ಮಂಜುನಾಥ್ ಹಾಗೂ ಇತರರು ಮನವಿ ಮಾಡಿಕೊಂಡು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ರಮ್ಯಾಕ್ಕಾ ನಾವು ನಿಮ್ಮ ಬಾಡಿಗೆ ಸಹೋದರರು. ಶನಿವಾರ ಉಪ ಚುನಾವಣೆ ನಡೆಯಲಿದೆ. ನೀವು ಬಂದು ಮತದಾನ ಮಾಡಬೇಕು. ನಿಮ್ಮ ಪಕ್ಷದಿಂದ ಅಭ್ಯರ್ಥಿ ಹಾಕಿಲ್ಲ. ನೀವು ನಮ್ಮ ಮನೆಮಗಳು, ನಿಮ್ಮ ಪಕ್ಷದವರು ನಿಮ್ಮ ಕಾಲು ಎಳೆಯುತ್ತಾರೆ. ಆದರೆ ನಾವು ಹಾಗಲ್ಲ. ನೀವು ಬಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment