ರಾಷ್ಟ್ರ ಸುದ್ದಿ

ಮೋದಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ: ಮಲ್ಯ ಹಸ್ತಾಂತರ ಕುರಿತು ಅರುಣ್ ಜೇಟ್ಲಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಯುಕೆನಲ್ಲಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಆದೇಶ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಕುರಿತಂತೆ ಪ್ರತಿಕ್ರಯಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ “ಮೋದಿ ಸರ್ಕಾರ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ” ಎಂದಿದ್ದಾರೆ.
ಜೇಟ್ಲಿ ತಮ್ಮ ಟ್ವಿಟ್ತರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು “ಮಲ್ಯರನ್ನು ಭಾರತಕ್ಕೆ ಕರೆತರುವ ವಿಚಾರದಲ್ಲಿ ಮೋದಿ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಆದರೆ ವಿರೋಧ ಪಕ್ಷಗಳು ಮಾತ್ರ ಶಾರದಾ ಚಿಟ್ ಫಂಡ್ ಹಗರಣದ ಭಾಗೀದಾರರೊಡನೆ ಸಭೆ ನಡೆಸುತ್ತಿದೆ.” ಎಂದಿದ್ದಾರೆ. ಸೋಮವಾರ ಯುಕೆ ಸರ್ಕಾರ ಮಲ್ಯ ಹಸ್ತಾಂತರಕ್ಕೆ ಅನುಮತಿ ನೀಡಿದೆಯಾದರೂ ಮಲ್ಯ ಈ ಅನುಮತಿಯನ್ನು ಪ್ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಕ್ಕೆ ಸಹ ಅವಕಾಶವಿದೆ.ಮೂಲಗಳ ಪ್ರಕಾರ, ಭಾರತಕ್ಕೆ ಮಲ್ಯ ಹಿಂತಿರುಗುವ ಸಂಬಂಧ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಯಲು ಕನಿಷ್ಠ 7-8 ತಿಂಗಳು ಬೇಕಾಗಲಿದೆ.

About the author

ಕನ್ನಡ ಟುಡೆ

Leave a Comment