ರಾಜ್ಯ ಸುದ್ದಿ

ಮೋದಿ ಸರ್ಕಾರ ಭಾರತೀಯರೊಂದಿಗೆ ಯುದ್ಧ ನಡೆಸುತ್ತಿದ್ದು, ಉಸಿರುಗಟ್ಟಿಸುವ ಸಿದ್ಧಾಂತ ಹೇರುತ್ತಿದೆ: ರಾಹುಲ್

ನವದೆಹಲಿ: ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರ ಭಾರತೀಯರೊಂದಿಗೆ ಯುದ್ಧ ಮಾಡುತ್ತಿದ್ದು, ಉಸಿರುಗಟ್ಟಿಸುವ ಸಿದ್ಧಾಂತಗಳನ್ನು ಹೇರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಲೀಡರ್’ಶಿಪ್ ಶೃಂಗಸಭೆ 2018′ ಉದ್ದೇಶಿಸಿ ಮಾತನಾಡಿರುವ ಅವರು, ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರಂತಹ ಚಿಂತಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವವರನ್ನು ವಜಾ ಮಾಡಲಾಗುತ್ತಿದೆ. ಭಾರತವನ್ನು ಹೀಯಾಳಿಸುವುದು, ಭಾರತೀಯರ ವರ್ಚಸ್ಸನ್ನು ಹಾಳು ಮಾಡುತ್ತಿರುವುದನ್ನು ಇಂದು ನಾವು ನೋಡುತ್ತಿದ್ದೇವೆ. ಸ್ವಂತ ಜನರೊಂದಿಗೆಯೇ ಭಾರತ ಸರ್ಕಾರ ಯುದ್ಧ ನಡೆಸುತ್ತಿದೆ. 1.3 ಬಿಲಿಯನ್ ಜನರ ಮೇಲೆ ತನ್ನ ಒಂದು ಸಿದ್ಧಾಂತವನ್ನು ಹೇರುವ ಸಲುವಾಗಿ ಈ ರೀತಿ ವರ್ತಿಸುತ್ತಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡವುದು, ಆರ್ಥಿಕತೆ ನಾಶಗೊಳ್ಳುವಂತೆ ಮಾಡುವುದು, ರುಪಾಯಿ ಮೌಲ್ಯ ಕುಸಿಯುವಂತೆ ಮಾಡುವುದು, ಪೆಟ್ರೋಲ್ ಬೆರೆ ಏರಿಕೆ ಮಾಡುವುದು ಯುದ್ಧದ ಲಕ್ಷಣಗಳಾಗಿವೆ. ಅಸಂಘಟಿತ ವಲಯ ಮಾಡಿದ ನೋಟು ನಿಷೇಧದ ಪರಿಣಾದಿಂದಾಗಿ ಬಹುಪಯೋಗಿ ಜಿಎಸ್’ಟಿ (ಸರಕು ಮತ್ತು ಸೇವಾ ತೆರಿಗೆ) ಬಲಿಯಾಯಿತು. ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕೊಚ್ಚಿಹೋದವು. ಸಾರ್ವಜನಿಕರ ವಿಶ್ವಾಸ ನಾಶವಾಗಿದೆ. ನಿರೀಕ್ಷೆಗಳು ಅಕ್ರೋಶಗಳಾಗಿ ಬದಲಾಗಿವೆ. ದೇಶದ ಮೂಲೆ ಮೂಲೆಗಳಲ್ಲಿ ದಲಿತರು ಹಾಗೂ ಬುಡಕಟ್ಟು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ ಕಾರಣಕ್ಕೆ ಮಾಧ್ಯಮಗಳಲ್ಲಿರುವ ನಮ್ಮ ಗೆಳೆಯರನ್ನು ವಜಾಗೊಳಿಸಲಾಗುತ್ತಿದೆ. ಗೌರಿ ಲಂಕೇಶ್ ಬರೆದಿದ್ದ ಬರಹಗಳಿಂದಾಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಹೊಸ ಆಲೋಚನೆಗಳಿಗೆ ಸ್ವಾಗತಗಳು ದೊರೆಯುತ್ತಿಲ್ಲ. ಹೊಸ ಆಲೋಚನೆಗಳನ್ನು ಬಿಡಿ, ಚಿಂತಕರನ್ನೇ ಅವರು ಇಷ್ಟ ಪಡುತ್ತಿಲ್ಲ. ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿವೆ. ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಇಂದು ಹೊರಗೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಭಾರತ ಇಂದು ಹೊತ್ತಿ ಉರಿಯುತ್ತಿದೆ. ಸರ್ಕಾರ ಕೇವಲ ಮೇಕ್ ಇನ್ ಇಂಡಿಯಾ ಮತ್ತು ಕ್ಲೀನ್ ಇಂಡಿಯಾ ಬಗ್ಗೆ ಮಾತನಾಡುತ್ತಿದೆ ಎಂದಿದ್ದಾರೆ. ಇದೇ ವೇಳೆ ರವೀಂದ್ರ ನಾಥ್ ಠಾಗೂರ್ ಅವರ ‘ವೇರ್ ದ ಮೈಂಡ್ ಇಸ್ ವಿತೌಟ್ ಫಿಯರ್’ ಸಾಲುಗಳನ್ನು ಹೇಳಿದ ರಾಹುಲ್ ಅವರು, ಎಲ್ಲಾ ಭಾರತೀಯರು ಸ್ವತಂತ್ರ ಹಾಗೂ ತಾರತಮ್ಯ ಇಲ್ಲದೆ ಜೀವನ ನಡೆಸುವುದನ್ನು ಊಹಿಸಿಕೊಳ್ಳುವಂತೆ ಜನರಿಗೆ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment