ರಾಷ್ಟ್ರ ಸುದ್ದಿ

ಮೋದಿ ಹವಾ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿಗೆ ಸೇರ್ಪಡೆ

ಅಹಮದಾಬಾದ್: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ರಿವಾಬಾ ಜಡೇಜಾ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಸೇರಲು ನನಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಫೂರ್ತಿ. ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನನ್ನ ಸೇವೆ ಸಲ್ಲಿಸಲು ಬಿಜೆಪಿ ಸೇರಿದ್ದರಿಂದ ನನಗೆ ಅವಕಾಶ ದೊರಕಿದೆ ಅಂತ ನಾನು ನಂಬಿದ್ದೇನೆ ಎಂದರು. ಇನ್ನು ಪತಿ ರವೀಂದ್ರ ಜಡೇಜಾ ಬಗ್ಗೆ ಪ್ರಶ್ನಿಸಿದ್ದಕ್ಕೆ, ಜಡೇಜಾ ಅವರು ನಮ್ಮ ರಜಪೂತ್ ಸಮುದಾಯಕ್ಕೆ ಮಾತ್ರ ಹೆಮ್ಮೆಯಲ್ಲ, ಯುವ ಜನಾಂಗಕ್ಕೂ ಹೆಮ್ಮೆ. ಆದರೆ ಬಿಜೆಪಿ ಸೇರ್ಪಡೆಯಾಗುವ ವಿಚಾರ ನನ್ನ ವೈಯಕ್ತಿಕ ನಿರ್ಧಾರ. ಇದರಿಂದ ಸಮಾಜದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ನೆರವಾಗುತ್ತದೆ ಎಂದರು.

About the author

ಕನ್ನಡ ಟುಡೆ

Leave a Comment