ರಾಜಕೀಯ

ಯಡಿಯೂರಪ್ಪನವ್ರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಏನು ಗೊತ್ತಿದೆ: ಸಿದ್ದರಾಮಯ್ಯ

ಬಾಗಲಕೋಟೆ: ಮಂಗಳವಾರ 3ಗಂಟೆ ನಂತರ ಏನಾಗಲಿದೆ ಎಂದು ಕಾದು ನೋಡಿ ಎಂದಿದ್ದ  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ‘ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವ ಕೆಲಸ ಬಿಟ್ಟು ಬೇರೇನಿದೆ. ಶಾಕ್‌ ಅವರಿಗೆ ಹೊಡೆಯುತ್ತದೆ,ನಮಗೆ ಹೊಡೆಯುವುದಿಲ್ಲ .ಅವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ’ ಎಂದು ಕಿಡಿ ಕಾರಿದರು.

‘ಸರಕಾರ ಇವತ್ತು ಬೀಳುತ್ತೆ,ನಾಳೆ ಬೀಳುತ್ತೆ ಎಂದು ಹೇಳುತ್ತಾ ತಿರುಗಾಡುತ್ತಿದ್ದಾರೆ.ಸರ್ಕಾರ ಬಿತ್ತಾ’ ಎಂದು ಪ್ರಶ್ನಿಸಿದರು. ‘ಬಳ್ಳಾರಿ ಲೋಕ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ  ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಯಾವುದೇ ಭಿನ್ನಮತ ಇಲ್ಲ ಎಲ್ಲವನ್ನೂ ವಿಚಾರ ಮಾಡಿಯೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ.ಅಭ್ಯರ್ಥಿಯ ಆಯ್ಕೆ ಸರಿಯಾಗಿ ಇದೆ’ ಎಂದರು.

 

About the author

ಕನ್ನಡ ಟುಡೆ

Leave a Comment