ರಾಜ್ಯ ಸುದ್ದಿ

ಬಿ.ಎಸ್.ಯಡಿಯೂರಪ್ಪ ರೆಡ್ಡಿ ಭೇಟಿ, ಜೈಲಿಗೆ ಹೋದಾಗ ಕೈ ಬಿಟ್ಟಿದ್ದಕ್ಕೆ ಕೋಪತಾಪ

ಬೆಂಗಳೂರು : ಅಂಬಿಡೆಂಟ್​ ಲಂಚ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೆ ಒಳಗಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ಗಣಿ ದಣಿ ಜನಾರ್ದನ ರೆಡ್ಡಿ ನೆನ್ನೆ ತಡರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ನಗರದ ಡಾಲರ್ಸ್​ ಕಾಲೋನಿಯಲ್ಲಿರುವ ಬಿಎಸ್​ವೈ ಮನೆಗೆ ರಾತ್ರಿ ಭೇಟಿ ನೀಡಿದ ರೆಡ್ಡಿ, ಸಿಸಿಬಿ ಬಂಧನ, ಸರ್ಕಾರದ ಸೇಡಿನ‌ ರಾಜಕೀಯದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಮಾತುಕತೆ ವೇಳೆ ಬಿಜೆಪಿ ನಾಯಕರ ವರ್ತನೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಜನಾರ್ದನ ರೆಡ್ಡಿ, “ಬಿಜೆಪಿಗೆ ನಾನೇನು ಮಾಡಿದ್ದೇನೆ? ನನ್ನ ಬಂಧಿಸಲು ಸಂಚು ನಡೆಯುವಾಗ ಯಾರು ಏಕೆ ಬೆಂಬಲಕ್ಕೆ ನಿಲ್ಲಲಿಲ್ಲ. ನಾನು ಬಿಜೆಪಿಗಾಗಿ ಏನೆಲ್ಲಾ ಮಾಡಿದ್ದೇನೆ. ನಿಮ್ಮ ವಿಚಾರದಲ್ಲಿ ಆ ದಿನಗಳಲ್ಲಿ ಅಚಾತುರ್ಯ ನಡೆದಿದ್ದು ನಿಜ. ಅದಾದ ಮೇಲೆ‌ ನೀವೇಳಿದಂತೆ ನಡೆದುಕೊಂಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲೂ ಕೆಲಸ ಮಾಡಿದ್ದೇನೆ,” ಎಂದು ಬಿಎಸ್​ವೈ ಬಳಿ ದುಃಖ ತೋಡಿಕೊಂಡಿದ್ದಾರೆ.

ರೆಡ್ಡಿ ಅಳಲು ಕೇಳಿದ ಬಿಎಸ್​ವೈ, “ನೀವಿನ್ನು ಹೆದರಬೇಡ. ನಾವು ನಿಮ್ಮ ಜೊತೆ ಇರುತ್ತೇವೆ.
ಈಗ ನೀವು ಮುಂದೆ ಯೋಗೇಶ್ವರ್ ಬಿಜೆಪಿ ನಾಯಕರನ್ನು ಮಾನಿಟರ್ ಮಾಡಲು ಆರಂಭಿಸಿದ್ದಾರೆ. ಸಿಎಂ‌ ಎಚ್.ಡಿ.ಕೆ ಸೇಡಿನ ರಾಜಕೀಯ ಮಾಡಲು ಬಿಡಲ್ಲ. ಇನ್ನು ಮುಂದೆ ನಾವು ಆಕ್ರಮಣಕಾರಿಯಾಗಿ ಇರೋಣ. ನೀವು ಕಾನೂನು ಹೋರಾಟ ಮಾಡಿ. ನಮ್ಮ‌ ಬೆಂಬಲ‌ ಇರುತ್ತೆ. ಸಿಎಂ ಜೊತೆ ಡಿಕೆಶಿಯೂ ಸೇರಿಕೊಂಡಿದ್ದಾರೆ. ಇವರ ಆಟಕ್ಕೆ ಬ್ರೇಕ್ ಹಾಕೋದು ಗೊತ್ತು,” ಎಂದು ಸಮಾಧಾನ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment