ರಾಜಕೀಯ

ಯದುವೀರ್ ಒಡೆಯರ್ ಅವರನ್ನು ರಾಜಕೀಯಕ್ಕೆ ಸೆಳೆಯಲು ಅಮಿತ್ ಶಾ ಯತ್ನ

ಬೆಂಗಳೂರು: ಮೈಸೂರು ರಾಜಮನೆತನದವರನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುವ ಮಾತುಗಳಿಗೆ ಇದೀಗ ಪುಷ್ಟಿ ಸಿಕ್ಕಿದೆ.  ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಭೇಟಿ ಮಾಡುವ ಸ್ಯಾಧತೆ ಇರುವ ಹಿನ್ನೆಲೆಯಲ್ಲಿ ಅವರು ನಾಳೆ ಮತ್ತು ನಾಡಿದ್ದು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನಾಳೆ ಅಮಿತ್ ಶಾ ಅವರು ಮೈಸೂರಿನ ಒಡೆಯರ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಹೇಳಿದ್ದಾರೆ. ಯದುವೀರ್ ಇನ್ನೂ ಕೂಡ ರಾಜಕೀಯಕ್ಕೆ ಬರುವ ಒಲವು ತೋರಿಸಿಲ್ಲ ಎಂದು ಬಂದಿದೆ. ಅವರು ನಾಳೆ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಮೈಸೂರು, ಮಂಡ್ಯಗಳಲ್ಲಿ ಅಮಿತ್ ಶಾ ಮಠ, ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

 

 

About the author

ಕನ್ನಡ ಟುಡೆ

Leave a Comment