ರಾಜ್ಯ ಸುದ್ದಿ

ಯಲಬುರ್ಗಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ವಿಆರ್‌ಎಲ್‌ ಬಸ್‌

ಕೊಪ್ಪಳ: ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ವಿಆರ್‌ಎಲ್‌ ಸಂಸ್ಥೆಯ ಬಸ್‌ನಲ್ಲಿ‌ ಬ್ಯಾಟರಿ ಶಾರ್ಟ್ ಸರ್ಕೀಟ್‌  ಸಂಭವಿಸಿ ಬಸ್‌ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿದ್ದ 32 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ವಿಜಯಪುರಕ್ಕೆ ಬಸ್ ಸಂಚರಿಸುತ್ತಿತ್ತು. ಗುನ್ನಾಳ ಕ್ರಾಸ್ ಬಳಿ ಏಕಾಏಕಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕೀಟ್‌ ಸಂಭವಿಸಿದೆ. ಕೂಡಲೇ ಅಪಾಯದ ಮುನ್ಸೂಚನೆ ಅರಿತ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ಸಿಬ್ಬಂದಿ ಪ್ರಯಾಣಿಕರು ಹಾಗೂ ಲಗೇಜ್‌ನ್ನು ಕೆಳಗೆ ಇಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಷ್ಟಗಿ ಅಗ್ನಿಶಾಮಕ ದಳದ ಸಿಬ್ಬಂದಿ,  ಬೆಂಕಿ‌‌ ನಂದಿಸಲು ಪ್ರಯತ್ನಿಸಿದರು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.  ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment