ರಾಷ್ಟ್ರ ಸುದ್ದಿ

ಯಾವುದೇ ರೀತಿಯ ಲಾಬಿಗೆ ಮಣಿಯಲ್ಲ, ಪಕ್ಷದಲ್ಲಿ ಪರಿಶ್ರಮಕ್ಕೆ ಮಾತ್ರ ಆದ್ಯತೆ: ರಾಹುಲ್

ನವದೆಹಲಿ: ರಾಜಸ್ತಾನ ಸಂಪುಟ ಸೇರ್ಪಡೆ ಕಸರತ್ತು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಾಮಾಣಿಕರಿಗೆ ಮಾತ್ರ ಮಣೆ ಹಾಕುವುದಾಗಿ ಹೇಳಿದ್ದಾರೆ.
ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದ್ದು, ಇದೀಗ ರಾಜಸ್ತಾನ ಸಂಪುಟ ಕಸರತ್ತು ಜೋರಾಗಿದೆ. ಈ ಹಿನ್ನಲೆಯಲ್ಲಿ ಮಂತ್ರಿ ಸ್ಥಾನಕ್ಕಾಗಿ ಹಲವು ಲಾಬಿ ನಡೆಸಿದ್ದು, ತಮ್ಮ ಪ್ರಭಾವ ಬಳಸಿಕೊಂಡು ಸಚಿವಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಮಾತ್ರ ಮಣೆಹಾಕಲಾಗುತ್ತದೆ. ಅಲ್ಲದೇ ಕೇವಲ ನಾಮ್ ಕೇ ವಾಸ್ತೆ ಕೆಲಸ ಮಾಡಿ ಇದೀಗ ಪಕ್ಷ ಗೆದ್ದ ಬಳಿಕ ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಪುಟ ವಿಸ್ತರಣೆಗಾಗಿ ರಾಹುಲ್ ಗಾಧಿ ಅವರು, ರಾಜಸ್ತಾನಕ್ಕೆ ವೀಕ್ಷಕರನ್ನು ಕೂಡ ರವಾನೆ ಮಾಡಿದ್ದಾರೆ. ಎಐಸಿಸಿ ಕಾರ್ಯದರ್ಶಿ (ರಾಜಸ್ತಾನ ಉಸ್ತುವಾರಿ) ಅವಿನಾಶ್ ಪಾಂಡೆ ಅವರನ್ನು ವೀಕ್ಷಕರಾಗಿ ರಜಾಸ್ತಾನಕ್ಕೆ ಕಳುಹಿಸಲಾಗಿದ್ದು, ಅವರೊಂದಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರೂ ಕೂಡ ಸಾಥ್ ನೀಡಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ರಾಜಸ್ಥಾನ ಸಚಿವ ಸಂಪುಟ ರಚನೆ ಕಾರ್ಯ ನಡೆಯಲಿದೆ. ಸಂಪುಟಕ್ಕೆ ಈಗಾಗಲೇ 23 ಸಚಿವರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ್ದು, ಯುವ ಮತ್ತು ಪ್ರಾಮಾಣಿಕ ನಾಯಕ ಮತ್ತು ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅಂತೆಯೇ ಸಚಿವ ಸ್ಥಾನ ಸಿಗದೇ ಭಿನ್ನಮತೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳವ ನಾಯಕರಿಗೂ ರಾಹುಲ್ ಗಾಂಧಿ ಖಡಕ್ ಎಚ್ಚರಿಕೆ ನೀಡಿದ್ದು, ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗುವ ಯಾವುದೇ ನಾಯಕನ ವಿರುದ್ಧ ಕಠಿಣ ಶಿಸ್ತು ಕ್ರಮ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ರಾಜಸ್ತಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಗಢ ಸಂಪುಟ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಕರ್ನಾಟಕದ ಸಂಪುಟ ವಿಸ್ತರಣೆ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್
ಇನ್ನು ಹಾಲಿ ಸಂಪುಟ ರಚನೆ ಕಾರ್ಯಕ್ಕೆ ಕರ್ನಾಟಕ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ ಪಕ್ಷ ಕಲಿತ ಪಾಠವೇ ಕಾರಣ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಜಾರಕಿಹೊಳಿ ಸಹೋದರರ ವಿವಾದದ ಬಳಿಕ ರಾಹುಲ್ ಗಾಂಧಿ ಇಂತಹುದೊಂದು ನಡೆ ಸಾಮಾನ್ಯವಾಗಿಯೇ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ನಾಯಕರಿಗೆ ಎಚ್ಚರಿಕೆ ಕರೆಗಂಟೆಯಾಗಿದೆ.

About the author

ಕನ್ನಡ ಟುಡೆ

Leave a Comment