ರಾಷ್ಟ್ರ

ಯುಗಾದಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಲೋಕಸಭೆಯು ಗುರುವಾರ ಸಂಘಟಿತ ವಲಯದ ಉದ್ಯೋಗಿಗಳ ತೆರಿಗೆಮುಕ್ತ ಗ್ರಾಚ್ಯುಟಿ ಮಿತಿಯನ್ನು ದ್ವಿಗುಣಗೊಳಿಸಲು ಅಂದರೆ 20 ಲಕ್ಷ ರೂ.ಗೆ ಹೆಚ್ಚಿಸಲು ಪೂರಕವಾದ ವಿಧೇಯಕವನ್ನು ಅಂಗೀಕರಿಸಿದೆ.ಲೋಕಸಭೆಯ ಕಳೆದ ಚಳಿಗಾಲದ ಅಧಿವೇಶದಲ್ಲಿಯೇ ಕೇಂದ್ರ ಕಾರ್ಮಿಕ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಅವರು ವಿಧೇಯಕ ಮಂಡಿಸಿದ್ದರು.

ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದಲ್ಲಿ 20 ಲಕ್ಷ ರೂ.ವರೆಗೆ ತೆರಿಗೆ ಮುಕ್ತ ಗ್ರಾಚ್ಯುಟ್ ಸೌಲಭ್ಯವನ್ನು ಖಾಸಗಿ ವಲಯಕ್ಕೂ ವಿಸ್ತರಿಸುವ ಸಲುವಾಗಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದೆ.ಯಾರಿಗೆ ಸಿಗಲಿದೆ ಈ ಸೌಲಭ್ಯ.? 1972ರ ಗ್ರಾಚ್ಯುಟಿ ಪಾವತಿ ಕಾಯ್ದೆ ಪ್ರಕಾರ ನೌಕರರು ನಿವೃತ್ತರಾದ ಬಳಿಕ ಅಥವಾ ಐದು ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದ ಸಂದರ್ಭದಲ್ಲಿ ಗ್ರಾಚ್ಯುಟಿಯನ್ನು ನೀಡಲಾಗಿದೆ.

ಕಾರ್ಖಾನೆಗಳು ಗಣಿಗಳು ಬಂದರು ರೈಲ್ವೆ ಕಂಪನಿಗಳು ಸೇರಿದಂತೆ ಖಾಸಗಿ ವಲಯದ ನೌಕರರು ಇದರ ಲಾಭವನ್ನು ಪಡೆದುಕೊಳ್ಳಲಿದ್ದಾರೆ.ಆದರೆ 10ಕ್ಕಿಂತ ಹೆಚ್ಚಿನ ನೌಕರರಿರುವ ಕಂಪನಿ ಅಥವಾ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.ಸೇವೆಯ ಪ್ರತಿವರ್ಷದ 15 ದಿನಗಳ ವೇತನವನ್ನು ಗ್ರ್ಯಾಜ್ಯೂಟಿಯಾಗಿ ಪಡೆದುಕೊಳ್ಳಬಹುದಾಗಿದೆ.

About the author

ಕನ್ನಡ ಟುಡೆ

Leave a Comment