ಕ್ರೀಡೆ

ಯುಪಿ ಯೋಧಾಗೆ ಸತತ ಎರಡನೇ ಗೆಲುವು

ಪಟನಾ: ಕನ್ನಡಿಗ ಪ್ರಶಾಂತ್ ರೈ(11 ಅಂಕ) ಮತ್ತು ಕೊನೇ ಕ್ಷಣದಲ್ಲಿ ಶ್ರೀಕಾಂತ್ ಜಾಧವ್(12) ತೋರಿದ ಆಕರ್ಷಕ ರೈಡಿಂಗ್ ನಿರ್ವಹಣೆಯ ನೆರವಿನಿಂದ ಯುಪಿ ಯೋಧಾ ತಂಡ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಸತತ 2ನೇ ಗೆಲುವಿನ ಸಂಭ್ರಮ ಆಚರಿಸಿದೆ. ಪಾಟಲಿಪುತ್ರ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಯುಪಿ ಯೋಧಾ 38-36 ಅಂಕಗಳಿಂದ ದಬಂಗ್ ದೆಹಲಿ ತಂಡವನ್ನು ರೋಚಕವಾಗಿ ಮಣಿಸಿತು. ಇದರೊಂದಿಗೆ ಯುಪಿ ಯೋಧಾ ಬಿ ಗುಂಪಿನಲ್ಲಿ 3ನೇ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದೆ.

ರೋಚಕವಾಗಿ ಸಾಗಿದ ಪಂದ್ಯದಲ್ಲಿ ಕೊನೇ 38ನೇ ನಿಮಿಷದವರೆಗೆ ಉಭಯ ತಂಡಗಳೂ 35-35ರಿಂದ ಸಮಬಲ ಸಾಧಿಸಿದಾಗ ಫಲಿತಾಂಶದ ಬಗ್ಗೆ ಕುತೂಹಲ ಗರಿಗೆದರಿತು. ಈ ವೇಳೆ ರೈಡಿಂಗ್​ಗೆ ಇಳಿದ ದೆಹಲಿಯ ನವೀನ್ ಕುಮಾರ್ ಒಂದು ಅಂಕ ತಂದು 36-35 ಮುನ್ನಡೆಯೊಂದಿಗೆ ಗೆಲುವಿನ ನಿರೀಕ್ಷೆ ಮೂಡಿಸಿದರು. ಆದರೆ ನಂತರದ ಪ್ರಯತ್ನದಲ್ಲಿ ಯೋಧಾ ತಂಡದ ಶ್ರೀಕಾಂತ್ 2 ಆಕರ್ಷಕ ರೈಡಿಂಗ್ ಅಂಕ ಸಂಪಾದಿಸಿ 37-36 ಮುನ್ನಡೆಯೊಂದಿಗೆ ಜಯ ಖಚಿತಪಡಿಸಿದರು.

About the author

ಕನ್ನಡ ಟುಡೆ

Leave a Comment