ರಾಜಕೀಯ

ಯೋಗೀಶ್ವರ್​ಗೆ ಸಿದ್ಧವಾಗಿದೆ ಖೆಡ್ಡಾ: ಉರುಳಾಗುವುದೇ ಮೆಗಾಸಿಟಿ ವಂಚನೆ ಹಗರಣ

ಬೆಂಗಳೂರು: ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದ ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಪಿ ಯೋಗೀಶ್ವರ್​ ಅವರನ್ನು ಖೆಡ್ಡಾಕ್ಕೆ ಬೀಳಿಸಲು ಸಕಲ ತಯಾರಿಗಳೂ ನಡೆಯುತ್ತಿವೆ. ಯೋಗೀಶ್ವರ್ ಅವರ ವಿರುದ್ಧ ದಾಖಲಾಗಿರುವ ಮೆಗಾಸಿಟಿ ವಂಚನೆ ಹಗರಣ, ಆದಾಯ, ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಹಳೇ ಪ್ರಕರಣಗಳಲ್ಲಿ ಯೋಗೀಶ್ವರ್​ ಅವರ ಹುಳುಕು ಹುಡುಕಲು ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಗೊತ್ತಾಗಿದೆ.

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯೋಗೀಶ್ವರ್​ ಅವರನ್ನು ಕಟ್ಟಿಹಾಕಲು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್​ ಅವರು ತನಿಖೆಯ ಮೂಲಕ ದಾಳ ಉರುಳಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಆದರೂ, ಮೆಗಾಸಿಟಿ ಹಗರಣ ಯೋಗೀಶ್ವರ್​ ಅವರನ್ನು ದಶಕದಿಂದಲೂ ಬಾಧಿಸುತ್ತಲೇ ಬಂದಿದೆ. ಇನ್ನೊಂದೆಡೆ, ರಾಮನಗರ ಉಪ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯೇ ಹೈಜಾಕ್​ ಆದ ನಂತರ ಸಿ.ಪಿ.ಯೋಗೀಶ್ವರ್​ ಅವರು ತಮ್ಮ ಕ್ಷೇತ್ರವನ್ನೇ ತೊರೆದಿದ್ದಾರೆ. ಅಷ್ಟೇ ಅಲ್ಲ, ಯಾರ ಫೋನ್​ ಕರೆಯನ್ನೂ ಸ್ವೀಕರಿಸುತ್ತಿಲ್ಲ.

About the author

ಕನ್ನಡ ಟುಡೆ

Leave a Comment