ರಾಷ್ಟ್ರ ಸುದ್ದಿ

ಯೋಧ ಪಂಕಜ್​ ಕೊಲೆ ಪ್ರಕರಣ: ಇಬ್ಬರು ಯೋಧರಿಂದಲೇ ಕೃತ್ಯ

ಬೆಂಗಳೂರು: ಯೋಧ ಪಂಕಜ್​ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆಂಧ್ರ ಮೂಲದ ಮುರಳಿಕೃಷ್ಣ ಹಾಗೂ ಧನರಾಜ್ ಎಂಬ ಯೋಧರಿಂದಲೇ ಪಂಕಜ್​ ಕೊಲೆಯಾಗಿದೆ ಎಂದು ಆರೋಪಿಸಲಾಗಿದೆ. ಮೂರು ದಿನಗಳ ಹಿಂದೆ ವಿವೇಕನಗರದ ಎಎಸ್​ಸಿ ಸೆಂಟರ್​ ಮತ್ತು ಕಾಲೇಜು ಆವರಣದಲ್ಲಿ ಉತ್ತರ ಪ್ರದೇಶ ಮೂಲದ ಯೋಧ ಪಂಕಜ್​ ಕೊಲೆಯಾಗಿತ್ತು.

ಕೊಲೆಯಾದ ಯೋಧ ಪಂಕಜ್;

ಹಗ್ಗದಿಂದ ಬಿಗಿದು, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ನಂತರ ಶವವನ್ನ ಸುಟ್ಟುಹಾಕಲು ಆರೋಪಿಗಳು ಯತ್ನಿಸಿದ್ದರು. ಯೋಧ ಮುರಳಿಕೃಷ್ಣನ ಕೆಲ ದಾಖಲಾತಿಗಳನ್ನು ಮೃತ ಪಂಕಜ್ ಕಳ್ಳತನ ಮಾಡಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ಯಾವ ದಾಖಲಾತಿಗಳು ಏನು ಎಂಬುದರ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

About the author

ಕನ್ನಡ ಟುಡೆ

Leave a Comment