ಸುದ್ದಿ

ರಂಗಾಯಣ ನಟ, ರಂಗ ನಿರ್ದೇಶಕ ಮಂಜುನಾಥ್ ಬೆಳಕೆರೆ ನಿಧನ 

ಮೈಸೂರು, ಡಿ-೧೯: ರಂಗಾಯಣ ಕಲಾವಿದೆ, ನಿರ್ದೇಶಕ, ರಂಗ ವಿನ್ಯಾಸ ಮಂಜುನಾಥ್ ಬೆಳಕೆರೆ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಹಲವಾರು ನಾಟಕಗಳಲ್ಲಿ ನಟಿಸಿ, ನಿರ್ದೇಶನ ಮಾಡಿದ್ದ ಮಂಜುನಾಥ್ ಕಳೆದ ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿ ಮಾತ್ರವಲ್ಲದೇ ಕೆಲ ಚಿತ್ರಗಳಲ್ಲಿಯೂ ಮಂಜುನಾಥ್ ಬೆಳಕೆರೆ ಅವರು ನಟಿಸಿದ್ದರು.

ಹರಿಹರ ಮೂಲದ ಮಂಜುನಾಥ್ ಬೆಳಕೆರೆ ಅವರು 1989ರಿಂದಲೂ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಂಗ ದಿಗ್ಗಜ ಬಿವಿ ಕಾರಂತ್ ಸೇರಿದಂತೆ ಹಲವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಮಂಜುನಾಥ್ ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮಂಜುನಾಥ್ ಅವರ ಮೃತದೇಹವನ್ನು ರಂಗಾಯಣ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮಂಜುನಾಥ್ ಬೆಳಕೆರೆ ಅವರ ನಿಧನಕ್ಕೆ ರಂಗಾಯಣ ನಟರು, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ

About the author

ಕನ್ನಡ ಟುಡೆ

Leave a Comment