ರಾಷ್ಟ್ರ ಸುದ್ದಿ

ರಜತ ಮಹೋತ್ಸವ: ನೌಕರರಿಗೆ ರೂ.1 ಕೋಟಿ ಎಸ್’ಯುವಿ ಕಾರು ಉಡುಗೊರೆಯಾಗಿ ನೀಡಿದ ವಜ್ರಗಳ ವ್ಯಾಪಾರಿ ಸಾವ್ಜಿ ಧೋಲಾಕಿಯಾ

ಸೂರತ್: ದೀಪಾವಳಿ ಹಬ್ಬಕ್ಕೆ ನ1ಕರರಿಗೆ ಕಾರು, ಮನೆ, ಒಡವೆಗಳನ್ನು ಉಡುಗೊರೆಯಾಗಿ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ವಜ್ರಗಳ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಇದೀಗ ಮತ್ತೆ ತಮ್ಮ ನೌಕರರಿಗೆ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.
ಸೂರತ್ ಮೂಲಕ ವಜ್ರದ ವ್ಯಾಪಾರಿಯಾಗಿರುವ ಸಾವ್ಜಿಯವರು, ತಮ್ಮ ಕಂಪನಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಹಿನ್ನಲೆಯಲ್ಲಿ ತಮ್ಮ ನೌಕರರಿಗೆ ರೂ.1 ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್ ಎಸ್’ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಂಪನಿಯಲ್ಲಿ ಕಳೆದ 25 ವರ್ಷಗಳಿಂದ ಹಿರಿಯ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಮೂವರಿಗೆ ಈ ದುಬಾರಿ ಕಾರುಗಳನ್ನು ಸಾವ್ಜಿಯವರು ಉಡುಗೊರೆಯಾಗಿ ನೀಡಿದ್ದಾರೆ. ನೀಲೇಶ್ ಜಡಾ (40), ಮುಖೇಶ್ ಚಂದ್ಪರ (38) ಮಹೇಶ್ ಚಂದ್ಪರ (43) ಅವರು ಈ ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ.

ಕಂಪನಿಯ ರಜತ ಮಹೋತ್ಸವ ಸೂರತ್ ನಲ್ಲಿ ನಡೆದಿದ್ದು, ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮೂವರಿಗೆ ಉಡುಗೊರೆಗಳನ್ನು ನೀಡಲಾಗಿದೆ. ಅವರವರ ಕಾರ್ಯವೈಖರಿಯ ಆಧಾರದ ಮೇರೆಗೆ ನೌಕರರಿಗೆ ಉಡುಗೊರೆಗಲನ್ನು ನೀಡಲಾಗಿದೆ. ಪ್ರಸ್ತುತ ಉಡುಗೊರೆ ಪಡೆದುಕೊಂಡಿರುವ ಮೂವರೂ ನೌಕರರು ಯುವಕರಾಗಿದ್ದಾಗಲೇ ಕಂಪನಿಗೆ ಸೇರ್ಪಡೆಗೊಂಡಿದ್ದರು ಎಂದು ಸಾವ್ಜಿಯವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment