ರಾಷ್ಟ್ರ ಸುದ್ದಿ

ರಣರಂಗವಾದ ಶಬರಿಮಲೆ; ನಿಳಕ್ಕಲ್ ಸೇರಿದಂತೆ ಕೇರಳದ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ

ತಿರುವನಂತಪುರಂ: ದಕ್ಷಿಣ ಭಾರತದ ಖ್ಯಾತ ಧಾರ್ಮಿಕ ಕ್ಷೇತ್ರ ಶಬರಿಮಲೆ ಇದೀಗ ಅಕ್ಷರಶಃ ರಣಾಂಗಣವಾಗಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಭಕ್ತರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಹಿಂಸಾರೂಪ ಪಡೆದುಕೊಂಡಿದ್ದು, ಪಂಪೆ ಹಾಗೂ ನೀಳಕ್ಕಲ್​ ನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಹಲವರಿಗೆ ಗಾಯವಾಗಿದ್ದು, ಕೇರಳದ ಬಹುತೇಕ ಭಾಗಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಅಂತೆಯೇ ನೀಳಕ್ಕಲ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಜನ ಬೆಂಬಲ ಹೆಚ್ಚಾದಂತೆ ಪ್ರತಿಭಟನಾ ನಿರತರ ಚಪ್ಪರ ಕಿತ್ತೆಸೆದ ಪೊಲೀಸರು: ಇನ್ನು ಕಳೆದ ಕೆಲವು ದಿನಗಳಿಂದ ನೀಳಕ್ಕಲ್​ನಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಜನಬೆಂಬಲ ಹೆಚ್ಚುತ್ತಿದ್ದಂತೆ, ಪೊಲೀಸರು ಬುಧವಾರ ನಸುಕಿಗೆ ಮುಷ್ಕರನಿರತರನ್ನು ಚದುರಿಸಿ, ಅವರು ಹಾಕಿಕೊಂಡಿದ್ದ ಚಪ್ಪರ ಕಿತ್ತೆಸೆದಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಅಯ್ಯಪ್ಪ ಆಚಾರಾನುಷ್ಠಾನ ಸಮಿತಿ ಕಾರ್ಯಕರ್ತರು ಮತ್ತೆ ಚಪ್ಪರ ನಿರ್ವಿುಸಿ ಮುಷ್ಕರ ಮುಂದುವರಿಸಿದರು. ರಸ್ತೆಯಲ್ಲಿ ಕುಳಿತು ಅಯ್ಯಪ್ಪ ಘೊಷಣೆ ಮೊಳಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ರಸ್ತೆಯಿಂದ ಬದಿಗೆ ಸರಿಸಿದರು. ಹಿಂದು ಐಕ್ಯವೇದಿ ವತಿಯಿಂದ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಆಂಧ್ರ ಪ್ರದೇಶದ 40ರ ಹರೆಯದ ಮಹಿಳೆಯೊಬ್ಬರು ಪಂಪೆ ಮೂಲಕ ಸನ್ನಿಧಾನ ಹಾದಿಯಲ್ಲಿ ತೆರಳಲು ಯತ್ನಿಸಿದರು. ಭಕ್ತರ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಪಸ್ ತೆರಳಬೇಕಾಯಿತು.

About the author

ಕನ್ನಡ ಟುಡೆ

Leave a Comment