ರಾಷ್ಟ್ರ ಸುದ್ದಿ

ರಫೇಲ್​ ಬಗ್ಗೆ ಚರ್ಚೆಗೆ ಬನ್ನಿ ಎಂದ ಜೇಟ್ಲಿ: ನಾವು ಸಿದ್ಧ, ಸಮಯ ನಿಗದಿ ಮಾಡಿ ಎಂದ ಖರ್ಗೆ

ದೆಹಲಿ: ರಫೇಲ್​ ಒಪ್ಪಂದದ ಕುರಿತು ಸೋಮವಾರ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿದೆ. ರಫೇಲ್​ ಕುರಿತ ಚರ್ಚೆಗೆ ಬನ್ನಿ, ಓಡಿಹೋಗಬೇಡಿ ಎಂಬ ವಿತ್ತ ಸಚಿವ ಅರುಣ್​ ಜೇಟ್ಲಿ ಅವರ ಸವಾಲು ಸ್ವೀಕರಿಸಿದ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಚರ್ಚೆಗೆ ನಾವು ಸಿದ್ಧ. ಜ.2ರಂದು ಸಮಯ ನಿಗದಿ ಮಾಡಿ, ಎಂದು ಹೇಳಿದ್ದಾರೆ. ಜೇಟ್ಲಿ ಜೀ ನಮಗೆ ಸವಾಲೆಸೆದಿದ್ದಾರೆ. ನಾವು ಒಪ್ಪಿಕೊಂಡಿದ್ದೇವೆ. ಜ.2 ರಂದು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಸಮಯ ನಿಗದಿ ಮಾಡಿ.”ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಸ್ಪೀಕರ್​ಗೆ ತಿಳಿಸಿದ್ದಾರೆ.

ರಫೇಲ್ ಒಪ್ಪಂದದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಖರ್ಗೆ ಆಗ್ರಹಿಸಿದರು. ಇದಕ್ಕೆ ಪ್ರತಿಯಾಗಿ ಸಚಿವ ಜೇಟ್ಲಿ, “ರಫೇಲ್ ಬಗ್ಗೆ ಚರ್ಚೆ ಆರಂಭಿಸಿ, ನಾವು ಉತ್ತರಕ್ಕೆ ಸಿದ್ಧರಿದ್ದೇವೆ. ಕಾಂಗ್ರೆಸ್ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ನಿರೂಪಿಸುತ್ತೇವೆ,” ಎಂದು ಜೇಟ್ಲಿ ಸವಾಲು ಎಸೆದರು. ಆಗ ಖರ್ಗೆ ಅವರು ಸವಾಲು ಒಪ್ಪಿರುವುದಾಗಿ ತಿಳಿಸಿದರು. ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷ ಸಂಸದರು ಸ್ಪೀಕರ್ ಸುಮಿತ್ರಾ ಮಹಾಜನ್ ಎದುರು ರಫೇಲ್ ತನಿಖೆ ಕುರಿತು ಪ್ರತಿಭಟನೆ ನಡೆಸಿದರು.

About the author

ಕನ್ನಡ ಟುಡೆ

Leave a Comment