ರಾಜಕೀಯ

ರಮೇಶ್ ಜಾರಕಿಹೊಳಿ ಬಿಗ್ ಹಾರ್ಟ್ ಹೊಂದಿರುವ ಗುಡ್ ಬಾಯ್: ಡಿಕೆಶಿ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಬೆದರಿಕೆ ಒಡ್ಡಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ನಿರ್ಧಾರಕ್ಕೆ  ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರಮೇಶ್ ಜಾರಕಿಹೊಳಿ ವಿಶಾಲ ಹೃದಯದ ಉತ್ತಮ ಹುಡುಗ ಎಂದು ತಮ್ಮ ಶೈಲಿಯಲ್ಲಿ ಹೇಳುವ ಮೂಲಕ ಜಾರಕಿಹೊಳಿ ಕಾಲೆಳೆದಿದ್ದಾರೆ. ರಮೇಶ್ ಬಿಗ್ ಹಾರ್ಟ್ ಹೊಂದಿರುವ ಗುಡ್ ಬಾಯ್ ಆತನ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಜಾರಕಿಹೊಳಿ ಮತ್ತು ಸಚಿವ ಡಿ.ಕೆ ಶಿವಕುಮಾರ್  ನಡುವೆ ಅಸಮಾಧಾನವಿದ್ದು, ಡಿಕೆಶಿ ವಿರುದ್ಧ ರಮೇಶ್ ಪಕ್ಷದ ನಾಯಕರಿಗೆ ದೂರು ನೀಡಿದ್ದರು, ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ತಲೆ ಹಾಕಬಾರದೆಂದು ಹೈಕಮಾಂಡ್ ಬಳಿ ದೂರು ನೀಡಿದ್ದರು, ಪಕ್ಷದ ಒಳಿತಿಗಾಗಿ ಕೆಲವು ನಾಯಕರು ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment