ಸಿನಿ ಸಮಾಚಾರ

ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಸಿನಿಮಾ ಪ್ರಾರಂಭ

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮನು ಕಲ್ಯಾಡಿ ನಿರ್ದೇಶನದ ಮುಂದಿನ ಸಿನಿಮಾಗೆ ಪ್ರಾರಂಭ ಎಂಬ ಟೈಟಲ್ ಫೈನಲ್ ಆಗಿದೆ.
ಈ ಚಿತ್ರದ ಟೈಟಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಯಕಿಯಾಗಿ  ಕೀರ್ತಿ ಕಲ್ಕೇರಿ ಪರಿಚಯಗೊಳ್ಳಲಿದ್ದಾರೆ. 75ಕ್ಕೂ ಅಧಿಕ ನಟಿಯರಿಗೆ ಆಡಿಷನ್ ಮಾಡಿದ ಬಳಿಕ ಕೀರ್ತಿಗೆ ಅವಕಾಶ ನೀಡಿದ್ದಾರೆ ನಿರ್ದೇಶಕ ಮನು ಕಲ್ಯಾಡಿ. ‘ಈ ಪಾತ್ರಕ್ಕೆ ಮುಗ್ಧ ಮುಖದ ಹೊಸ ನಟಿಯೇ ಬೇಕಿತ್ತು. ಅದಕ್ಕೆ ಕೀರ್ತಿ ಸೂಕ್ತ ಆಗುತ್ತಾರೆ ಎನಿಸಿತು’ ಎನ್ನುತ್ತಾರೆ ನಿರ್ದೇಶಕರು.
ಈಗಾಗಲೇ ಒಂದು ತಿಂಗಳು ವರ್ಕ್​ಶಾಪ್ ಮಾಡಲಾಗಿದ್ದು ಮನೋರಂಜನ್ ಮತ್ತು ಕೀರ್ತಿ ಭಾಗಿ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜ.14ರಂದು ಈ ಚಿತ್ರಕ್ಕೆ ಶೂಟಿಂಗ್ ಆರಂಭವಾಗಲಿದೆ. ಇದರಲ್ಲಿ ಮನೋರಂಜನ್ ಪಾತ್ರಕ್ಕೆ ಮೂರು ಶೇಡ್​ಗಳು ಇರಲಿವೆ.
ಜಗದೀಶ್ ಕಲ್ಯಾಡಿ ನಿರ್ಮಾಣ ಮಾಡಲಿದ್ದಾರೆ. ರವಿಚಂದ್ರನ್ ಸಿನಿಮಾಗಳಲ್ಲಿ ಪ್ರೇಕ್ಷಕರು ಬಯಸುವ ಕೌಟುಂಬಿಕ ಕಥಾಹಂದರ ‘ಪ್ರಾರಂಭ’ದಲ್ಲೂ ಇರಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯ.

About the author

ಕನ್ನಡ ಟುಡೆ

Leave a Comment