ರಾಜಕೀಯ

ರವಿ ಗಣಿಗೆ ಮಂಡ್ಯ ಟಿಕೆಟ್​ ಫೈನಲ್​ ಮಾಡಿದ ಪರಮೇಶ್ವರ್​

ಬೆಂಗಳೂರು: ಮಂಡ್ಯ ವಿಧಾನಸಭೆ ಕ್ಷೇತ್ರದ ಟಿಕೆಟ್​ ವಿಚಾರವಾಗಿ ಕಳೆದ ಮೂರು ದಿನಗಳಿಂದ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ ರವಿ ಗಣಿಗ ಅವರಿಗೆ ಟಿಕೆಟ್​ ನೀಡಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್​ ಅವರು ನಿರ್ಧರಿಸಿದ್ದಾರೆ.

ಕೊನೇ ಕ್ಷಣದವರೆಗೂ ಮಾಜಿ ಸಚಿವ ಅಂಬರೀಷ್​ ಅವರು ಸ್ಪರ್ಧೆಯ ಕುರಿತು ತಮ್ಮ ನಿರ್ಧಾರವನ್ನು ಪ್ರಕಟಿಸದ ಹಿನ್ನೆಲೆಯಲ್ಲಿ ರವಿ ಗಣಿಗ ಅವರಿಗೆ ಅದೃಷ್ಟ ಒಲಿದಿದೆ. ಈ ಹಿನ್ನೆಲೆಯಲ್ಲಿ ಅಮರಾವತಿ ಚಂದ್ರಶೇಖರ್​ ಮತ್ತು ರವಿ ಗಣಿಗ ಅವರೊಂದಿಗೆ ಪರಮೇಶ್ವರ್​ ಚರ್ಚೆ ನಡೆಸಿದ್ದರು. ಚರ್ಚೆ ಬಳಿಕ ಪರಮೇಶ್ವರ್​ ಅವರು ರವಿ ಅವರಿಗೆ ಟಿಕೆಟ್​ ಫೈನಲ್​ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 

About the author

ಕನ್ನಡ ಟುಡೆ

Leave a Comment