ರಾಷ್ಟ್ರ ಸುದ್ದಿ

ರಾಜಕೀಯ ಅಪಪ್ರಚಾರಕ್ಕೆ ಕೋರ್ಟ್ ತೀರ್ಪು ತಿರುಚಿದ ರಾಹುಲ್ ಗಾಂಧಿ: ಅರುಣ್ ಜೇಟ್ಲಿ

ಹೊಸದಿಲ್ಲಿ: ರಫೇಲ್ ಪ್ರಕರಣ ದಕುರಿತ ಸುಪ್ರೀಂ ಕೋರ್ಟ್‌ ಆದೇಶವನ್ನು ರಾಜಕೀಯ ಅಪ ಪ್ರಚಾರಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಚಿದ್ದಾರೆ ಎಂದು ಅರುಣ್ ಜೇಟ್ಲಿ ವಿತ್ತಸಚಿವ  ಆರೋಪಿಸಿದ್ದಾರೆ. ವಾಕ್‌ ಸ್ವಾತಂತ್ರ್ಯದ ಹಕ್ಕು ಇದೆ ಎಂದ ಮಾತ್ರಕ್ಕೆ ಅದು ಸುಳ್ಳು ಪ್ರತಿಪಾದನೆಯ ಹಕ್ಕಲ್ಲ ಎಂದು ಜೇಟ್ಲಿ ನುಡಿದರು. ವ್ಯಾಖ್ಯಾನಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಕೇಸು ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿರುವ ಕೋರ್ಟ್ ಏಪ್ರಿಲ್ 10ರಂದು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿ ಏಪ್ರಿಲ್ 22ರೊಳಗೆ ಉತ್ತರ ಸಲ್ಲಿಸುವಂತೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ, ‘ರಾಹುಲ್ ಗಾಂಧಿಯ ರಾಜಕೀಯದಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕು ಎಂದರೆ ಸುಳ್ಳು ಪ್ರತಿಪಾದನೆಯ ಹಕ್ಕೂ ಸೇರಿರುತ್ತದೆ’ ಎಂದು ಟೀಕಿಸಿದರು. ವಂಶವಾದಿಗಳು ಸುಪ್ರೀಂ ಕೋರ್ಟ್ ತೀರ್ಪನ್ನೂ ಸುಳ್ಳು ಎಂದು ಪ್ರತಿಪಾದಿಸುತ್ತಾರೆ ಎಂದು ಜೇಟ್ಲಿ ಹೇಳಿದರು.

‘ಭಾರತದ ಪ್ರಜಾಪ್ರಭುತ್ವದಲ್ಲಿ ಕೋರ್ಟ್ ತೀರ್ಪನ್ನು ಅವರು (ಅನುವಂಶೀಯ ರಾಜಕಾರಣಿಗಳು) ತಮಗೆ ಬೇಕಾದಂತೆ ತಿರುಚುವಂತಿಲ್ಲ. ರಾಜಕೀಯ ಅಪ ಪ್ರಚಾರಕ್ಕಾಗಿ ಕೋರ್ಟ್ ಆದೇಶವನ್ನೂ ಅವರು ಕೃತಕವಾಗಿ ತಯಾರಿಸುತ್ತಾರೆ. ಇದು ರಾಹುಲ್ ಗಾಂಧಿ ಎಷ್ಟು ನೀಚ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರು ನೀಚತನಕ್ಕೆ ಇಳಿದಷ್ಟೂ ನಾವು ಮತ್ತಷ್ಟು ಮೇಲ್ಮಟ್ಟಕ್ಕೆ ಏರುತ್ತೇವೆ’ ಎಂದು ಜೇಟ್ಲಿ ಹೇಳಿದ್ದಾರೆ.

ರಫೇಲ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಮೋದಿ ಅವರನ್ನು ಚೌಕಿದಾರ್ ಎಂದೂ ಹೇಳಿಲ್ಲ, ಚೋರ್ ಎಂದೂ ಉಲ್ಲೇಖಿಸಿಲ್ಲ. ಆದರೆ ತೀರ್ಪನ್ನು ತಿರುಚಿ ವ್ಯಾಖ್ಯಾನಿಸಿದ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್’ ಎಂದು ಸುಪ್ರೀಂ ಕೋರ್ಟೇ ಹೇಳಿದೆ ಎಂದು ಅಪ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂ ಕೋರ್ಟಿನಲ್ಲಿ ದೂರು ಸಲ್ಲಿಸಿದ್ದರು.

 

About the author

ಕನ್ನಡ ಟುಡೆ

Leave a Comment