ರಾಜ್ಯ ಸುದ್ದಿ

ರಾಜಕೀಯ ಗುರು ಎಸ್ ಎಂ ಕೃಷ್ಣರನ್ನು ಭೇಟಿ ಮಾಡಿದ ಡಿಕೆ.ಶಿವಕುಮಾರ್ ಹೇಳಿದ್ದೇನು

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೊಸವರ್ಷದ ಮೊದಲ ದಿನ ತಮ್ಮ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.
ಹೊಸ ವರ್ಷದ ಮೊದಲ ದಿನ ಶುಭಾಶಯ ಹೇಳುವುದಕ್ಕಾಗಿ ಡಿಕೆಶಿ ಮಾಜಿ ಮುಖ್ಯಮಂತ್ರಿಗಳ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ತಮ್ಮ ರಾಜಕೀಯ ಗುರುವಾದ ಎಸ್.ಎಂ.ಕೆ ಅವರಿಗೆ ಹೂಗುಚ್ಚ ನೀಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆಇದ್ದಾರೆ. ಕಾಂಗ್ರೆಸ್ ನಲ್ಲಿ ಅತ್ಯುನ್ನತ ನಾಯಕರಾಗಿದ್ದ ಎಸ್.ಎಂ. ಕೃಷ್ಣ ಪಕ್ಷದಲ್ಲಿ ನಡೆದ ಕೆಲವು ಬೆಳವಣಿಗೆಗಳಿಂದ ಬೇಸತ್ತು ಭಾರತೀಯ ಜನತಾ ಪಕ್ಷ ಸೇರಿದರು. ಆ ನಂತರ ಕಾಂಗ್ರೆಸ್ ಮುಖಂಡರು ಕೃಷ್ಣ ಅವರಿಂದ ಅಂತರ ಕಾಪಾಡಿಕೊಂಡಿದ್ದರು.
ಕೃಷ್ಣ ಬಿಜೆಪಿ ಸೇರುವುದಕ್ಕೆ ಮುನ್ನ ಡಿಕೆಶಿ ಅವರಿಗೆ ರಾಜಕೀಯದ ಗುರುವೇ ಆಗಿದ್ದರು.ಅಂತಹಾ ಗುರುವನ್ನು ಇಂದು ಡಿಕೆಶಿ ಭೇಟಿಯಾಗಿ ಶುಭಾಶಯ ಕೋರಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಭೇಟಿ ಬಳಿಕ ಸುದ್ದಿಗಾರಒಡನೆ ಮಾತನಾಡಿದ ಶಿವಕುಮಾರ್ “ನಾನು ಕೃಷ್ಣ ಅವರನ್ನು ಪಕ್ಷಕ್ಕೆ ಆಹ್ವಾನಿಸುವಷ್ಟು ದೊಡ್ಡವನಲ್ಲ. ನಮ್ಮೊಬ್ಬರದು ವೈಯುಕ್ತಿಕ ಬಾಂಧವ್ಯ. ಇದೊಂದು ವೈಕ್ಯುಕ್ತಿಕ ಮಟ್ಟದ ಭೇಟಿ ಮಾತ್ರ” ಎಂದು ಸ್ಪಷ್ಟನೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment