ರಾಜಕೀಯ

ರಾಜಕೀಯ ಸಂಚಲನ ಮೂಡಿಸಿದ ವೀರಪ್ಪ ಮೊಯ್ಲಿ ಟ್ವೀಟ್

ಬೆಂಗಳೂರು: ತಮ್ಮ ಪುತ್ರ ಹರ್ಷ ಮೊಯ್ಲಿಗೆ ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸುವಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವೇ ವೀರಪ್ಪ ಮೊಯ್ಲಿಯವರು ಟ್ವೀಟ್ ಮಾಡಲು ಕಾರಣ ಎಂದು ಹೇಳಲಾಗುತ್ತಿದ್ದು ಅವರ ಟ್ವೀಟ್ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗುತ್ತಿದೆ.

ತಮ್ಮ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ಕೊಡಿಸುವುದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ವಿರೋಧ ವ್ಯಕ್ತಪಡಿಸಿರುವುದು ವೀರಪ್ಪ ಮೊಯ್ಲಿಯವರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ ಎನ್ನಲಾಗುತ್ತಿದೆ.

ಈ ವರದಿಯನ್ನು ವೀರಪ್ಪ ಮೊಯ್ಲಿ ಮತ್ತು ಹೆಚ್.ಸಿ.ಮಹದೇವಪ್ಪ ಇಬ್ಬರೂ ನಿರಾಕರಿಸುತ್ತಿದ್ದರೂ ಕೂಡ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಚರ್ಚೆಗೆ ಬಂದಿತ್ತು.

ಈ ವಿವಾದಿತ ಟ್ವೀಟ್ ನಿಂದ ದೂರವುಳಿಯಲು ಪ್ರಯತ್ನಿಸುತ್ತಿರುವ ಮೊಯ್ಲಿಯವರು ತಮ್ಮ ಖಾತೆ ಹ್ಯಾಕ್ ಆಗಿದೆ ಎನ್ನುತ್ತಿದ್ದಾರೆ. ಮಹದೇವಪ್ಪ ಕೂಡ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಿದ್ದು ಪಕ್ಷದ ಅಭ್ಯರ್ಥಿಗಳನ್ನು ಅಂತಿಮವಾಗಿ ನಿರ್ಧರಿಸುವುದು ಪಕ್ಷದ ಹೈಕಮಾಂಡ್ ಹೊರತು ನಾವಲ್ಲ ಎನ್ನುತ್ತಿದ್ದಾರೆ.

 

 

About the author

ಕನ್ನಡ ಟುಡೆ

Leave a Comment