ಸಿನಿ ಸಮಾಚಾರ

ರಾಜರಥದ ಪ್ರಯಾಣ ಸುಂದರ ಅವಂತಿಕಾ ಶೆಟ್ಟಿ

ಬೆಂಗಳೂರು: ಅವಂತಿಕಾ ಶೆಟ್ಟಿ ರಂಗಿತರಂಗ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಅವರು ಅಭಿನಯದ ಮತ್ತೊಂದು ಚಿತ್ರ ರಾಜರಥ ಇದೇ ವಾರ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ರಾಜರಥ ಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಅವಂತಿಕಾ ಶೆಟ್ಟಿ ತೆಲುಗಿಗೂ ಪಾದಾರ್ಪಣೆ ಮಾಡುತ್ತಿದ್ದಾರೆ.

ನಮ್ಮ ಚಿತ್ರತಂಡವು ರಾಜರಥ ಚಿತ್ರಕ್ಕಾಗಿ ಬಹಳಷ್ಟು ಪರಿಶ್ರಮ ಮತ್ತು ತ್ಯಾಗ ಮಾಡಿದೆ. ಉತ್ತಮವಾಗಿ ಮೂಡಿಬರುವುದಕ್ಕೆ ಪ್ರತಿಯೊಬ್ಬರು ಶರ್ಮಪಡಿದ್ದಾರೆ ಎಂದು ಅವಂತಿಕಾ ಶೆಟ್ಟಿ ಹೇಳಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ರಂಗಿತರಂಗ ಚಿತ್ರತಂಡವು ರಾಜರಥ ಚಿತ್ರವನ್ನು ನಿರ್ಮಾಣ ಮಾಡಿರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಿದ

ಚಿತ್ರದಲ್ಲಿ ನಾನು ಮೇಘಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಪಾತ್ರ ನನಗೆ ಹೊಸ ಅನುಭವ ನೀಡಿದೆ. ಚಿತ್ರವು ಅಭಿ-ಮೇಘಾ ನಡುವಿನ ಪ್ರೇಮ ಪ್ರಯಾಣವಾಗಲಿದೆ. ನಾನು ಇತರ ಪಾತ್ರಗಳಿಗಿಂತ ಸ್ವಲ್ಪ ಹೆಚ್ಚು ಪರದೆ ಮೇಲೆ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ರಂಗಿತರಂಗ ಚಿತ್ರವನ್ನು ನಿರ್ದೇಶಿಸಿದ್ದ ಅನೂಪ್ ಭಂಡಾರಿ ರಾಜರಥ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರೂಪ್ ಭಂಡಾರಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಒಂದು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ

 

About the author

ಕನ್ನಡ ಟುಡೆ

Leave a Comment