ಸಿನಿ ಸಮಾಚಾರ

ರಾಜರಥ ಸಿನಿಮಾವನ್ನು 5 ಸಾವಿರ ಬಾರಿ ನೋಡಿದ್ದೇನೆ ಅನೂಪ್ ಭಂಡಾರಿ

ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಸಿನಿಮಾದ ನಂತರ ಅವರು ಮಾಡುತ್ತಿರುವ ಇನ್ನೊಂದು ಸಿನಿಮಾ  ರಾಜರಥ ತೆರಿಗೆ ಬರಲು ಸಿದ್ಧವಾಗಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ನಿದು ಇದರಲ್ಲಿ ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್, ಪುನೀತ್ ರಾಜ್ ಕುಮಾರ್, ರಾಣಾ ದಗ್ಗುಬಾಟಿ, ಮತ್ತು ಆರ್ಯ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾದ ಬಗ್ಗೆ ಮಾತ್ತನಾಡಿದ ಅನೂಪ್ ಅವರು ರಂಗಿತರಂಗದ ಸಿನಿಮಾದ ಚಿತ್ರೀಕರಣ 40 ದಿನಗಳಲ್ಲಿ ಮುಗಿದಿತ್ತು. ಆದರೆ ರಾಜರಥದಲ್ಲಿ ಹಾಗಾಗಿಲ್ಲ 80 ದಿನಗಳಲ್ಲಿ ಶೂಟಿಂಗ್ ಮುಗಿಯಬೇಕಿತ್ತು ಆದರೆ ಇದಕ್ಕೇ ಬರೋಬ್ಬರಿ 120 ದಿನ ಚಿತ್ರೀಕರಣ ನಡೆಸಿದ್ದೇವೆ ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿರುವುದರಿಂದ ಹೆಚ್ಚಿನ ಸಮಯಾವಾಕಾಶ ಬೇಕಾಯಿತು ಎಂದಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ನಿದ್ರೆ ಮಾಯಾ ವಾಗಿದೆ ರಾಜರಥ ಸಿನಿಮಾ ತಯಾರಿಸಲು ಬರೋಬ್ಬರೀ 2 ವರ್ಷ ಸಮಯ ಬೇಕಾಯಿತು ಎಂದು ಹೇಳುತ್ತಾರೆ.

ರಾಜರಥ ಸಿನಿಮಾ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಕನ್ನಡ ಮತ್ತ ಹಿಂದಿ ಸಿನಿಮಾಗಳನ್ನು ನಾನು ನೋಡುತ್ತಾ ಬೆಳೆದೆ ನಾನು ನೋಡಿದ ಸಿನಿಮಾಗಳಿಂದ ಉತ್ತೇಜನಗೊಂಡು ನಾನು ಸಿನಿಮಾ ಮಾಡಿದ್ದೇನೆ ಅವರ ಕ್ಯಾಮೆರಾ ಮೂಮೆಂಟ್ ಹಾಗೂ ಎಡಿಟಿಂಗ್ ವಿಧಾನವನ್ನು ಅನುಸರಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಇದುವರೆಗೂ ರಾಜರಥವನ್ನು 5 ಸಾವಿರ ಬಾರಿ ನೋಡಿದ್ದೇನೆ. ಆದರೆ ಒಮ್ಮೆಯೂ ನನಗೆ ಬೇಸರವಾಗಲಿಲ್ಲ ಪ್ರತಿ ವಿಭಾಗದಲ್ಲೂ ಮತ್ತಷ್ಟು ಬಾರಿ ಎಡಿಟಿಂಗ್ ಮಾಡುತ್ತೇನೆ ಪ್ರತಿ ತಂತ್ರಜ್ಞರ ಜೊತೆ ಕುಳಿತು ಕೆಲಸ ಮಾಡಿದ್ದೇನೆ ನನಗೆ ಸಿನಿಮಾ ತುಂಬಾ ಇಷ್ಟವಾಗಿದೆ ಪ್ರೇಕ್ಷಕರಿಗೂ ಸಿನಿಮಾ ಮೆಚ್ಚುಗೆಯಾಗಲಿದೆ ಎಂದು ನಾನು ನಮ್ಮ ಚಿತ್ರತಂಡ ಭಾವಿಸಿದ್ದೇವೆ ಎಂದು ಹೇಳಿದ್ದಾರೆ

 

 

About the author

ಕನ್ನಡ ಟುಡೆ

Leave a Comment