ರಾಜ್ಯ ಸುದ್ದಿ

ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ: ಎಚ್​ಡಿ.ದೇವೇಗೌಡ

ಹಾಸನ: ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದ್ದು, ಮಧ್ಯಪ್ರದೇಶದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವುದು ಸತ್ಯ. ನಾನು ಹೆಚ್ಚು ಎಲ್ಲಿಗೂ ಹೋಗಿಲ್ಲ. ಹಾಗಾಗಿ ಆ ಕುರಿತು ನನಗೆ ಹೆಚ್ಚು ತಿಳಿದಿಲ್ಲ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ತಿಳಿಸಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದುವೇಳೆ ಯಾವುದಾದರೂ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಅದು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದರು. ಈ ದೇಶದ ವ್ಯವಸ್ಥೆ ಬಗ್ಗೆ ಹೋರಾಟ ಮಾಡಲು ಪ್ರಾದೇಶಿಕ ಪಕ್ಷ ಮತ್ತು ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಸಭೆ ಕರೆದಿದ್ದಾರೆ. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಭವಿಷ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಅನುಮಾನ ಇರುವುದಕ್ಕೆ ಮಠಾಧೀಶರು ರಾಮಮಂದಿರ ಬೇಕು ಎಂದು ಹೇಳುತ್ತಿದ್ದಾರೆ. ರಾಮನ ದೇವಸ್ಥಾನ ಕಟ್ಟ ಬೇಕು ಎಂದು ಬಾಬ್ರಿ ಮಸೀದಿ ಒಡೆದರು. ನಂತರ ಆಡ್ವಾಣಿ ಅವರು ತಪ್ಪಾಯ್ತು ಕ್ಷಮೆ ಕೇಳುತ್ತೀನಿ ಎಂದಿದ್ದರು. ನಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಸಂವಿಧಾನದಲ್ಲಿ ಅಂಬೇಡ್ಕರ್ ಅನುವು ಮಾಡಿಕೊಟ್ಟಿದ್ದಾರೆ. ಆದರೆ ನೀವು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗ್ತಿದಿರಾ ಎಂದು ಪ್ರಶ್ನಿಸಿದರು.

About the author

ಕನ್ನಡ ಟುಡೆ

Leave a Comment