ಕ್ರೀಡೆ

ರಾಜಸ್ಥಾನ್ ರಾಯಲ್ಸ್‌ ವಿರುದ್ಧ ‌ಸೂಪರ್‌ಕಿಂಗ್ಸ್‌ ಜಯಭೇರಿ

ಪುಣೆ: ಅನುಭವಿ ಆಲ್‌ರೌಂಡರ್ ಶೇನ್ ವಾಟ್ಸನ್ (106; 57ಎ, 9ಬೌಂ, 6ಸಿ) ಅವರ ಸಿಡಿಲಬ್ಬರದ ಶತಕ ಮತ್ತು ಮಧ್ಯಮ ವೇಗಿಗಳ ಸಮರ್ಥ ದಾಳಿಯ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಗೆದ್ದಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 205 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 140 ರನ್‌ಗಳಿಗೆ ಆಲೌಟಾಗಿ 64 ರನ್‌ಗಳ ಸೋಲೊಪ್ಪಿಕೊಂಡಿತು.

About the author

ಕನ್ನಡ ಟುಡೆ

Leave a Comment