ರಾಷ್ಟ್ರ ಸುದ್ದಿ

ರಾಜಸ್ಥಾನ: ಜೋಧ್‌ಪುರ ಏರಿಂಡಿಯಾ ವಿಮಾನದಲ್ಲಿ ಬಾಂಬ್‌, ಎಲ್ಲ ಹಾರಾಟ ಅಮಾನತು

ಜೈಪುರ : ರಾಜಸ್ಥಾನದ ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ  ಹಾರಾಟಕ್ಕೆ ಸಿದ್ಧವಾಗಿದ್ದ  ಏರಿಂಡಿಯಾ ವಿಮಾನದಲ್ಲಿ ಬಾಂಬ್‌ ಭೀತಿ ಕಂಡು ಬಂದಿರುವುದನ್ನು ಅನುಸರಿಸಿ ಎಲ್ಲ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ. ಜೋಧ್‌ಪುರದಿಂದ ದಿಲ್ಲಿಗೆ ಹಾರಲಿದ್ದ ಏರಿಂಡಿಯಾ ವಿಮಾನವನ್ನು ಇದೀಗ ಭದ್ರತಾ ಪಡೆಗಳು ತೀವ್ರ ತಪಾಸಣೆಗೆ ಗುರಿ ಪಡಿಸಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ. ಜೋಧ್‌ಪುರ ವಿಮಾನ ನಿಲ್ದಾಣವು ಭಾರತೀಯ ವಾಯು ಪಡೆಯ  ವಾಯು ನೆಲೆಗೆ ತಾಗಿಕೊಂಡೇ ಇದೆ. ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಪ್ರಕೃತ ಸೇವಾನಿರತವಾಗಿರುವ ವಾಯುಯಾನ ಸಂಸ್ಥೆಗಳೆಂದರೆ ಏರಿಂಡಿಯ, ಜೆಟ್‌ ಏರ್‌ ವೇಸ್‌ ಮತ್ತು ಸ್ಪೈಸ್‌ ಜೆಟ್‌.

 

About the author

ಕನ್ನಡ ಟುಡೆ

Leave a Comment