ರಾಷ್ಟ್ರ ಸುದ್ದಿ

ರಾಜಸ್ಥಾನ ಬಿಜೆಪಿ ಸಂಸದ ಹರೀಶ್​ ಮೀನಾ ಕಾಂಗ್ರೆಸ್​ ಸೇರ್ಪಡೆ

ಜೈಪುರ: ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದಲ್ಲಿ ಬಿಜೆಪಿಗೆ ಹೊಡೆತ ಬಿದ್ದಿದೆ. ಬಿಜೆಪಿ ಸಂಸದ, ಮಾಜಿ ಪೊಲೀಸ್​ ಅಧಿಕಾರಿ ಹರೀಶ್​ ಮೀನಾ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.‘2014ರಲ್ಲಿ ದೌಸ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಹರೀಶ್​ ಮೀನಾ ಅವರು, ರಾಜಸ್ಥಾನದ ಮಾಜಿ ಪೊಲೀಸ್​ ಮಹಾ ನಿರ್ದೇಶಕರು. 2014ರಲ್ಲಿ ನಿವೃತ್ತಿ ಹೊಂದಿದ್ದ ಅವರು ಬಿಜೆಪಿ ಮೂಲಕ ರಾಜಕೀಯ ಆರಂಭಿಸಿದ್ದರು.

ಹರೀಶ್​ ಮೀನಾ ಅವರ ಸೋದರ ನಮೋ ನಾರಾಯಾಣ ಮೀನಾ ಅವರು ಕಟ್ಟಾ ಕಾಂಗ್ರೆಸಿಗ. ಮೀನಾ ಅವರು ಪ್ರತಿನಿಧಿಸುವ ಸಮುದಾಯ ಪಶ್ಚಿಮ ರಾಜಸ್ಥಾನದಲ್ಲಿ ಪ್ರಬಲವಾಗಿದೆ. ಅಲ್ಲದೆ, ಮೀನಾ ಸೋದರರೂ ಕೂಡ ಸಮುದಾಯದ ಮೇಲೆ ಪ್ರಭಾವ ಹೊಂದಿದ್ದಾರೆ. ಈ ಕಾರಣಕ್ಕೇ ಮೀನಾ ಅವರ ನಡೆ ಬಿಜೆಪಿಗೆ ಹೊಡೆತ ಎಂದೇ ಹೇಳಲಾಗಿದೆ. ಹರೀಶ್​ ಮೀನಾ ಅವರು 2009 ರಿಂದ 2013ರ ವರೆಗೆ ಸುದೀರ್ಘ ಅವಧಿಗೆ ಪೊಲೀಸ್​ ಮಹಾ ನಿರ್ದೇಶಕರಾಗಿದ್ದರು. ಹೀಗಾಗಿ ಸಹಜವಾಗಿಯೇ ಅವರು ರಾಜ್ಯದಲ್ಲಿ ಪ್ರಭಾವಿ ಎನಿಸಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ ಮತ್ತೊಂದು ಅವಧಿಯ ಅಧಿಕಾರಕ್ಕಾಗಿ ಸೆಣಸಾಡುತ್ತಿರುವ ಬಿಜೆಪಿಗೆ ಹರೀಶ್​ ಅವರ ಈ ನಡೆಯಿಂದ ಹಿನ್ನಡೆಯುಂಟಾಗಿದೆ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.” ಇಂಥ ಸಂದರ್ಭದಲ್ಲಿ ಹರೀಶ್​ ಮೀನಾ ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತೋಷ ತಂದಿದೆ. ಕಾಂಗ್ರೆಸ್​ಗೆ ಅವರನ್ನು ಸ್ವಾಗತಿಸುತ್ತೇನೆ,” ಎಂದು ರಾಜಸ್ಥಾನದ ಹಿರಿಯ ಕಾಂಗ್ರೆಸಿಸ್ಸಿಗ ಅಶೋಕ್​ ಗೆಹ್ಲೋಟ್​ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment