ರಾಜಕೀಯ

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಜತೆ ಬಿಎಸ್‌ಪಿ ಮೈತ್ರಿ ಕಟ್‌

ಲಖನೌ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನೂತನವಾಗಿ ರಚನೆಯಾದ ಕಾಂಗ್ರೆಸ್‌ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಕುರಿತು ಬಹುಜನ ಸಮಾಜವಾದಿ ಪಾರ್ಟಿ ನಾಯಕಿ ಮಾಯಾವತಿ ಚಿಂತನೆ ನಡೆಸಿದ್ದಾರೆ. ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಸಂದರ್ಭ ಉಭಯ ರಾಜ್ಯಗಳಲ್ಲಿ ‘ಕೆಲವು ಅಮಾಯಕರ’ ಮೇಲೆ ಪ್ರಕರಣ ದಾಖಲಾಗಿದೆ. ಅವುಗಳನ್ನು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೂಡಲೇ ರದ್ದುಪಡಿಸಬೇಕು. ಬಾಕಿ ಉಳಿದಿರುವ ಎಲ್ಲ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಬಿಎಸ್‌ಪಿ ಬೆಂಬಲವನ್ನು ಹಿಂಪಡೆಯಲಿದೆ ಎಂದು ಮಾಯಾವತಿ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಮತ್ತು ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದ ಕಾಂಗ್ರೆಸ್‌ಗೆ ಬಿಎಸ್‌ಪಿ ತಕ್ಷಣ ಬೆಂಬಲ ನೀಡಿ ಸರಕಾರ ರಚಿಸಲು ನೆರವಾಗಿತ್ತು. ಈ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳನ್ನು ಕೂಡ ಮಾಯಾವತಿ ವಿಧಿಸಿದ್ದರು. ಕಾಂಗ್ರೆಸ್‌ ತ್ವರಿತವಾಗಿ ಬೇಡಿಕೆ ಈಡೇರಿಸಬೇಕು ಮತ್ತು ಚುನಾವಣಾ ಪ್ರಣಾಳಿಕೆ ಜಾರಿಮಾಡಬೇಕು. ಬಿಜೆಪಿ ಹಾದಿಯನ್ನು ಕಾಂಗ್ರೆಸ್ ಅನುಸರಿಸಿದರೆ ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುತ್ತೇನೆ, ಕೂಡಲೇ ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆಯಿರಿ ಎಂದು ಮಾಯಾವತಿ ಸೂಚನೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment